ADVERTISEMENT

ಜಿಸ್ಯಾಟ್‌–30 ಉಡ್ಡಯನ ಯಶಸ್ವಿ

ಪಿಟಿಐ
Published 17 ಜನವರಿ 2020, 19:47 IST
Last Updated 17 ಜನವರಿ 2020, 19:47 IST
ಭಾರತದ ಸಂವಹನ ಉಪಗ್ರಹ ‘ಜಿಸ್ಯಾಟ್‌–30’ಅನ್ನು ಫ್ರಂಚ್‌ ಗಯಾನಾದಿಂದ ಶುಕ್ರವಾರ ನಸುಕಿನಲ್ಲಿ ಉಡಾವಣೆ ಮಾಡಲಾಯಿತು
ಭಾರತದ ಸಂವಹನ ಉಪಗ್ರಹ ‘ಜಿಸ್ಯಾಟ್‌–30’ಅನ್ನು ಫ್ರಂಚ್‌ ಗಯಾನಾದಿಂದ ಶುಕ್ರವಾರ ನಸುಕಿನಲ್ಲಿ ಉಡಾವಣೆ ಮಾಡಲಾಯಿತು   

ಬೆಂಗಳೂರು : ‘ಅತ್ಯುತ್ತಮ ಗುಣಮಟ್ಟದ’ ಸಂವಹನ ಉಪಗ್ರಹ ‘ಜಿಸ್ಯಾಟ್‌–30’ ಅನ್ನು ಫ್ರೆಂಚ್‌ ಗಯಾನಾ
ದಿಂದ ಶುಕ್ರವಾರ ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.

‘3,357 ಕೆ.ಜಿ ತೂಕದ ಜಿಸ್ಯಾಟ್‌–30 ಅನ್ನು ಅರೀನಾ–5 ರಾಕೆಟ್‌ ಸಹಾಯದಿಂದ ಶುಕ್ರವಾರ ನಸುಕಿನ 2.35ರ ವೇಳೆಗೆ ಉಡ್ಡಯನ ಮಾಡಿ, ಯಶಸ್ವಿಯಾಗಿ ಭೂ ಕಕ್ಷೆಗೆ ಸೇರಿಸಲಾಗಿದೆ’ ಎಂದು ಇಸ್ರೊ ಟ್ವೀಟ್‌ ಮಾಡಿದೆ.

‘ನಿಯಂತ್ರಣ ಕೊಠಡಿಯಲ್ಲಿರುವ ತಂಡವು ಈಗಾಗಲೇ ಉಪಗ್ರಹವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಶೀಘ್ರದಲ್ಲೇ ಉಡ್ಡಯನೋತ್ತರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಿದೆ’ ಎಂದು ಯು.ಆರ್‌ ರಾವ್‌ ಉಪಗ್ರಹ ಕೇಂದ್ರದ ನಿರ್ದೇಶಕ ಪಿ.ಉನ್ನಿಕೃಷ್ಣನ್‌ ಹೇಳಿದ್ದಾರೆ.

ADVERTISEMENT

ಜಿಸ್ಯಾಟ್‌–30, ಇಸ್ರೊ ಈ ಹಿಂದೆ ಉಡಾವಣೆ ಮಾಡಿದ್ದ ಐಎನ್‌ಸ್ಯಾಟ್‌/ಜಿಸ್ಯಾಟ್‌ ಸರಣಿಯ ಇನ್ನೊಂದು ಉಪಗ್ರಹವಾಗಿದ್ದು, ಇದು 12ಸಿ ಹಾಗೂ 12 ಕೆಯು ಬ್ಯಾಂಡ್‌ ಟ್ರಾನ್ಸ್‌ಪಾಂಡರ್‌ಗಳನ್ನು ಹೊಂದಿದೆ. ‘ಐಎನ್‌ಸ್ಯಾಟ್‌–4ಎ’ಯ ಕಾರ್ಯಾವಧಿಯು ಮುಕ್ತಾಯವಾಗುತ್ತಾ ಬಂದಿರುವುದರಿಂದ ಅದರ ಸ್ಥಾನವನ್ನು ಈ ಆಧುನಿಕ ಜಿಸ್ಯಾಟ್‌–30 ತುಂಬಲಿದೆ. ಡಿಟಿಎಚ್‌ ಟಿ.ವಿ. ಸೇವೆಗಳು ಹಾಗೂ ಸಂವಹನ ಸೇವೆಗಳ ಉದ್ದೇಶಕ್ಕಾಗಿ ಇದು ಬಳಕೆಯಾಗಲಿದೆ. ಇದು 15 ವರ್ಷ ಕೆಲಸ ಮಾಡಲಿದೆ ಎಂದು ಇಸ್ರೊ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.