ADVERTISEMENT

ಭ್ರಷ್ಟಾಚಾರ: 12 ಐ.ಟಿ ಅಧಿಕಾರಿಗಳು ವಜಾ

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 18:45 IST
Last Updated 10 ಜೂನ್ 2019, 18:45 IST

ನವದೆಹಲಿ: ಆದಾಯ ತೆರಿಗೆ (ಐ.ಟಿ) ಇಲಾಖೆಯ 12 ಹಿರಿಯ ಅಧಿಕಾರಿಗಳನ್ನು ಭ್ರಷ್ಟಾಚಾರ ಮತ್ತು ದುರ್ನಡತೆ ಆರೋಪದಲ್ಲಿ ಕೇಂದ್ರ ಸರ್ಕಾರವು ವಜಾ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಜಂಟಿ ಆಯುಕ್ತರೊಬ್ಬರ ವಿರುದ್ಧ ಭ್ರಷ್ಟಾಚಾರ ಮತ್ತು ಉದ್ಯಮಿಗಳಿಂದ ಸುಲಿಗೆ ಮಾಡಿದ ಆರೋಪ ಇತ್ತು. ಜತೆಗೆ, ‘ದೇವಮಾನವ’ ಚಂದ್ರಸ್ವಾಮಿಗೆ ನೆರವು ನೀಡಿದ ಆರೋಪ ಹೊತ್ತಿದ್ದಾರೆ.

ನೊಯ್ಡಾದಲ್ಲಿ ಆಯುಕ್ತ (ಮೇಲ್ಮನವಿ) ಹುದ್ದೆಯಲ್ಲಿರುವ ಐಆರ್‌ಎಸ್‌ (ಭಾರತೀಯ ರೆವೆನ್ಯೂ ಸೇವೆ) ಅಧಿಕಾರಿ ಕೂಡ ವಜಾಗೊಂಡವರಲ್ಲಿ ಸೇರಿದ್ದಾರೆ. ಆಯುಕ್ತ ಶ್ರೇಣಿಯ ಇಬ್ಬರುಮಹಿಳಾ ಅಧಿಕಾರಿಗಳು ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.