ADVERTISEMENT

ಅಮೆರಿಕದ ಟ್ರಂಪ್ ಸೋಲಿನಿಂದ ಭಾರತ ಏನನ್ನಾದರೂ ಕಲಿತರೆ ಒಳ್ಳೆಯದು: ಶಿವಸೇನಾ

ಏಜೆನ್ಸೀಸ್
Published 9 ನವೆಂಬರ್ 2020, 6:19 IST
Last Updated 9 ನವೆಂಬರ್ 2020, 6:19 IST
ಶಿವಸೇನಾ
ಶಿವಸೇನಾ   

ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೋಲಿನಿಂದ ಭಾರತವು ಏನನ್ನಾದರೂ ಕಲಿತರೆ ಒಳ್ಳೆಯದು ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣಾ ಸನ್ನಿವೇಶವನ್ನು ಬಿಹಾರ ವಿಧಾನಸಭಾ ಚುನಾವಣೆಯೊಂದಿಗೆ ಹೋಲಿಸಿ ಸೋಮವಾರ ಶಿವಸೇನಾ ಹೇಳಿದೆ.

ಶಿವಸೇನಾದ ಮುಖವಾಣಿ ಸಾಮ್ನಾದಲ್ಲಿ, ಅಧ್ಯಕ್ಷ ಟ್ರಂಪ್ ಅವರು ಎಂದಿಗೂ ಅಧ್ಯಕ್ಷ ಸ್ಥಾನಕ್ಕೆ ಅರ್ಹರಲ್ಲ. ಅಮೆರಿಕದ ಸಾರ್ವಜನಿಕರು ಟ್ರಂಪ್ ಬಗ್ಗೆ ತಾವು ಮಾಡಿದ ತಪ್ಪನ್ನು ಕೇವಲ ನಾಲ್ಕು ವರ್ಷಗಳಲ್ಲಿ ಸರಿಪಡಿಸಿದ್ದಾರೆ. ಟ್ರಂಪ್ ನೀಡಿದ್ದ ಒಂದು ಭರವಸೆಯನ್ನು ಕೂಡ ಅವರು ಈಡೇರಿಸಲಾಗಲಿಲ್ಲ. ಟ್ರಂಪ್‌ನ ಸೋಲಿನಿಂದ ನಾವು ಏನನ್ನಾದರೂ ಕಲಿಯಲು ಸಾಧ್ಯವಾದರೆ ಅದು ಒಳ್ಳೆಯದು ಎಂದು ಹೇಳಿದೆ.

ಅಮೆರಿಕದಲ್ಲಿ ನಿರುದ್ಯೋಗವೇ ಕೋವಿಡ್-19 ಸಾಂಕ್ರಾಮಿಕಕ್ಕಿಂತ ಹೆಚ್ಚಾಗಿದೆ. ಟ್ರಂಪ್ ಇದಕ್ಕೆ ಹೇಗಾದರೂ ಪರಿಹಾರವನ್ನು ಕಂಡುಕೊಳ್ಳುವ ಬದಲು, ಅಭಾಸ, ಅಲೆಮಾರಿ ಸ್ಥಿತಿ ಮತ್ತು ರಾಜಕೀಯ ಜಪಗಳ ಅಪಹಾಸ್ಯಕ್ಕೆ ಪ್ರಾಮುಖ್ಯತೆ ನೀಡುತ್ತಲೇ ಇದ್ದರು ಎಂದು ಪಕ್ಷ ಹೇಳಿದೆ.

ADVERTISEMENT

ಅಮೆರಿಕದಲ್ಲಿ ಈಗಾಗಲೇ ಅಧಿಕಾರ ಬದಲಾಗಿದೆ. ಬಿಹಾರದ ಅಧಿಕಾರವು ಈಗ ಕೆಳಭಾಗದಲ್ಲಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸೋಲುವುದು ಸ್ಪಷ್ಟವಾಗಿದೆ. ನಮ್ಮನ್ನು ಹೊರತುಪಡಿಸಿ ದೇಶ ಮತ್ತು ರಾಜ್ಯದಲ್ಲಿ ಬೇರೆ ಪರ್ಯಾಯಗಳಿಲ್ಲ ಎನ್ನುವ ಈ ಭ್ರಮೆಯಿಂದ ನಾಯಕರನ್ನು ತೆಗೆದುಹಾಕುವ ಕೆಲಸವನ್ನು ಜನರು ಮಾಡಬೇಕು ಎಂದು ತಿಳಿಸಿದೆ.

ಟ್ರಂಪ್ ತನ್ನ ಸೋಲನ್ನು ಒಪ್ಪಿಕೊಂಡಿಲ್ಲ. ಬದಲಿಗೆ ಮತದಾನದ ಹಗರಣದ ಬಗ್ಗೆ ಅವರು 'ಹಾಸ್ಯಾಸ್ಪದ' ಆರೋಪಗಳನ್ನು ಮಾಡಿದ್ದಾರೆ. ನಮ್ಮ ದೇಶದಲ್ಲಿ ಟ್ರಂಪ್ ಅವರನ್ನು ಎಷ್ಟು ಪ್ರೀತಿಯಿಂದ ಸ್ವಾಗತಿಸಲಾಯಿತು ಎಂಬುದನ್ನು ಮರೆಯಬಾರದು. ತಪ್ಪಾದ ಮನುಷ್ಯನೊಂದಿಗೆ ನಿಲ್ಲುವುದು ನಮ್ಮ ಸಂಸ್ಕೃತಿಯಲ್ಲ, ಆದರೆ ಅದನ್ನು ಇನ್ನೂ ಮಾಡಲಾಗುತ್ತಿದೆ. ಬೈಡನ್ ಈಗ ಅಮೆರಿಕದ ಮುಖ್ಯಸ್ಥರಾಗಲಿದ್ದಾರೆ ಎಂದಿದೆ.

ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಆಯ್ಕೆಯಾಗಿದ್ದಾರೆ. ಆಕೆಯ ಸಾಧನೆಯನ್ನು ಟ್ರಂಪ್ ಖಂಡಿಸಿದರು, ಅವರು ಮಹಿಳೆಗೆ ಗೌರವ ನೀಡಲಿಲ್ಲ ಮತ್ತು ಅಂತಹ ವ್ಯಕ್ತಿಯನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಬೆಂಬಲಿಸಿದರು ಎಂದು ದೂರಿದೆ.

ಭಾರತವು 'ನಮಸ್ತೆ ಟ್ರಂಪ್' ಕಾರ್ಯಕ್ರಮವನ್ನು ಹೇಗೆ ಸಂಘಟಿಸಿದರೂ ಕೂಡ, ಅಮೆರಿಕದ ಸಂವೇದನಾಶೀಲ ಜನರು ಟ್ರಂಪ್‌ಗೆ 'ಬೈ-ಬೈ' ಎಂದು ಹೇಳುವ ಮೂಲಕ ತಮ್ಮ ತಪ್ಪನ್ನು ಸರಿಪಡಿಸಿಕೊಂಡಿದ್ದಾರೆ ಮತ್ತು ಅವರ ತಪ್ಪನ್ನು ಗುರುತಿಸಿದ್ದಾರೆ. ಅದೇ ರೀತಿ ಪ್ರಧಾನಿ ಮೋದಿ, ನಿತೀಶ್ ಕುಮಾರ್ ಸೇರಿದಂತೆ ಹಲವು ನಾಯಕರು ಯುವ ನಾಯಕ ತೇಜಸ್ವಿ ಯಾದವ್ ಎದುರು ನಿಲ್ಲಲು ಸಾಧ್ಯವಾಗಲಿಲ್ಲ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.