ADVERTISEMENT

ಟ್ರಂಪ್ ‘ಅಮೆರಿಕದ ರಾಷ್ಟ್ರೀಯವಾದಿ’: ಜೈಶಂಕರ್ ಬಣ್ಣನೆ

ಪಿಟಿಐ
Published 30 ಜನವರಿ 2025, 14:30 IST
Last Updated 30 ಜನವರಿ 2025, 14:30 IST
<div class="paragraphs"><p>ಎಸ್. ಜೈಶಂಕರ್ </p></div>

ಎಸ್. ಜೈಶಂಕರ್

   

–ಪಿಟಿಐ ಸಂಗ್ರಹ ಚಿತ್ರ

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಅಮೆರಿಕದ ರಾಷ್ಟ್ರೀಯವಾದಿ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಬಣ್ಣಿಸಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವು ಬಲಿಷ್ಠವಾಗಿರಬೇಕು ಎಂದು ಹೇಳಿದ್ದಾರೆ.

ADVERTISEMENT

ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕ ಕೆಲಸಗಳ ಸ್ವರೂಪವು ವಿಕಾಸ ಹೊಂದುತ್ತಿರುವುದನ್ನು, ಭಾರತವು ಅದನ್ನು ಹೇಗೆ ನಿರ್ವಹಿಸುತ್ತಿದೆ ಎಂಬುದನ್ನು ಜೈಶಂಕರ್ ಅವರು ದೆಹಲಿ ವಿಶ್ವವಿದ್ಯಾಲಯದ ಹಂಸರಾಜ್ ಕಾಲೇಜಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

ಟ್ರಂಪ್ ಅವರು ಭಾರತದ ಪಾಲಿಗೆ ಸ್ನೇಹಿತರೇ ಅಥವಾ ಶತ್ರುವೇ ಎಂಬ ಪ್ರಶ್ನೆಗೆ ಉತ್ತರವಾಗಿ ಜೈಶಂಕರ್ ಅವರು ‘ಟ್ರಂಪ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನಾನು ಈಚೆಗೆ ಭಾಗಿಯಾಗಿದ್ದೆ. ನಮಗೆ ಒಳ್ಳೆಯ ಆತಿಥ್ಯ ಸಿಕ್ಕಿತು’ ಎಂದು ಹೇಳಿದ್ದಾರೆ. ಟ್ರಂಪ್ ಅವರ ನೀತಿಗಳು ಜಾಗತಿಕ ವಿಚಾರಗಳಲ್ಲಿ ಗಮನಾರ್ಹವಾದ ಬದಲಾವಣೆಗಳನ್ನು ತರಬಹುದಾದರೂ, ಭಾರತದ ವಿದೇಶಾಂಗ ನೀತಿಯು ರಾಷ್ಟ್ರದ ಹಿತಾಸಕ್ತಿಗೆ ಅನುಗುಣವಾಗಿ ಇರಲಿದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್ ಅವರ ಜೊತೆ ಗಾಢವಾದ ವೈಯಕ್ತಿಕ ಸಂಬಂಧವನ್ನು ಹೊಂದಿದ್ದಾರೆ ಎಂಬುದನ್ನು ಒತ್ತಿಹೇಳಿದ ಜೈಶಂಕರ್, ‘ಅಮೆರಿಕದ ಜೊತೆಗಿನ ನಮ್ಮ ಸಂಬಂಧವು ಬಲವಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.