ADVERTISEMENT

ಜಮ್ಮು ಕಾಶ್ಮೀರ | ಕದನ ವಿರಾಮ ಉಲ್ಲಂಘಸಿದ ಪಾಕಿಸ್ತಾನ: ಗುಂಡು ತಗುಲಿ ಯುವತಿಗೆ ಗಾಯ

ಏಜೆನ್ಸೀಸ್
Published 27 ಜೂನ್ 2020, 2:21 IST
Last Updated 27 ಜೂನ್ 2020, 2:21 IST
ಪೂಂಚ್ ಜಿಲ್ಲಾಧಿಕಾರಿ ರಾಹುಲ್ ಯಾದವ್‌
ಪೂಂಚ್ ಜಿಲ್ಲಾಧಿಕಾರಿ ರಾಹುಲ್ ಯಾದವ್‌   

ಪೂಂಚ್:ಜಮ್ಮು ಕಾಶ್ಮೀರದ ಪೂಂಚ್‌ ಜಿಲ್ಲೆಯ ಕೇರನಿ ಸೆಕ್ಟರ್‌ನ ಗಡಿ ಭಾಗದಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದೆ. ಈ ವೇಳೆ ಗುಂಡು ತಗುಲಿ ಯುವತಿಯೊಬ್ಬರು ಗಾಯಗೊಂಡಿದ್ದಾರೆ.

‘ಪಾಕಿಸ್ತಾನ ಕದನವಿರಾಮ ಉಲ್ಲಘಿಸಿದೆ. ಈ ವೇಳೆ 18 ವರ್ಷದ ಯುವತಿಯ ಎದೆ ಭಾಗಕ್ಕೆ ಗುಂಡು ತಗುಲಿ ಗಾಯವಾಗಿದೆ. ಸದ್ಯ ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ. ಅವರನ್ನು ಜಮ್ಮು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗುವುದು’ ಎಂದು ಜಿಲ್ಲಾಧಿಕಾರಿ ರಾಹುಲ್ ಯಾದವ್‌ ತಿಳಿಸಿದ್ದಾರೆ.

‘ಸಂತ್ರಸ್ತ ಯುವತಿಗೆ ಉತ್ತಮ ಆರೈಕೆ ಮತ್ತು ಚಿಕಿತ್ಸೆ ನೀಡಲಾಗುವುದು’ ಎಂದೂ ಭರವಸೆ ನೀಡಿದ್ದಾರೆ.

ADVERTISEMENT

ಯುವತಿ ಆರೋಗ್ಯವಾಗಿರುವುದನ್ನು ವೈದ್ಯರೂ ಖಚಿತಪಡಿಸಿದ್ದಾರೆ.

‘ಸದ್ಯ ಡ್ರೆಸ್ಸಿಂಗ್ ಮಾಡಲಾಗಿದೆ. ಗುಂಡು ದೇಹದಲ್ಲೇ ಇರುವುದುಎಕ್ಸ್‌–ರೇ ವರದಿಯಲ್ಲಿ ಕಂಡುಬಂದಿದೆ. ಶಸ್ತ್ರಚಿಕಿತ್ಸೆ ನಡೆಸಿ ಗುಂಡನ್ನು ಹೊರತೆಗೆಯಬೇಕಿದೆ. ಅದಕ್ಕಾಗಿ ರಕ್ತವನ್ನು ಹೊಂದಿಸಲಾಗುತ್ತಿದೆ. ಯುವತಿಯ ಆರೋಗ್ಯ ಸ್ಥಿರವಾಗಿದೆ’ ಎಂದು ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.