ADVERTISEMENT

ಉಗ್ರನಿಗೆ ನೆರವು ಪ್ರಕರಣ: ಜಮ್ಮು ಕಾಶ್ಮೀರ ಪೊಲೀಸರಿಂದ ದಾಳಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 13:43 IST
Last Updated 10 ಸೆಪ್ಟೆಂಬರ್ 2025, 13:43 IST
ಸಾಂದರ್ಭಿಕ (ಪಿಟಿಐ ಸಂಗ್ರಹ ಚಿತ್ರ)
ಸಾಂದರ್ಭಿಕ (ಪಿಟಿಐ ಸಂಗ್ರಹ ಚಿತ್ರ)   

ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ತನಿಖಾ ಸಂಸ್ಥೆಯು (ಎಸ್‌ಐಎ) ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಮತ್ತು ಪುಲ್ವಾಮ ಜಿಲ್ಲೆಗಳ ಎರಡು ಸ್ಥಳಗಳಲ್ಲಿ ಬುಧವಾರ ಮುಂಜಾನೆ ದಾಳಿ ನಡೆಸಿದೆ.

2005ರಲ್ಲಿ ಹಿಜ್ಬುಲ್ ಮುಜಾಹಿದ್ದೀನ್‌ನ ವಿಭಾಗೀಯ ಕಮಾಂಡರ್ ಅಮೀನ್ ಬಾಬಾ ಪಾಕಿಸ್ತಾನಕ್ಕೆ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ ಎಂದು ಎಸ್‌ಐಎ ವಕ್ತಾರರು ತಿಳಿಸಿದ್ದಾರೆ. ಮಾಜಿ ಶಾಸಕ ಗುಲ್ ರಫೀಕಿ ಮತ್ತು ಇತರರ ನೆರವಿನಿಂದ ಬಾಬಾ ಪರಾರಿಯಾಗಿದ್ದಾನೆ ಎಂದು ಅವರು ಹೇಳಿದ್ದಾರೆ.

ಆರೋಪಿಗಳು ಬಾಗಾಗೆ ನಕಲಿ ಪಾಸ್‌ಪೋರ್ಟ್‌ ವ್ಯವಸ್ಥೆ ಮಾಡಲು ಸಹಾಯ ಮಾಡಿದ್ದರು ಮತ್ತು ಆತನನ್ನು ಅನಂತನಾಗ್‌ನಿಂದ ಅಟಾರಿಗೆ ಆಗಿನ ಶಾಸಕರ ಅಧಿಕೃತ ವಾಹನದಲ್ಲಿ ಸಾಗಿಸಿದ್ದರು. ಇದರಿಂದಾಗಿ ಆತ ಪಾಕಿಸ್ತಾನ ತಲುಪುವುದು ಸಾಧ್ಯವಾಯಿತು ಎಂದು ವಕ್ತಾರರು ಹೇಳಿದ್ದಾರೆ.

ADVERTISEMENT

ಈ ಬಗ್ಗೆ 2005 ರಲ್ಲಿ ಬಿಜ್‌ಬೆಹರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಅದನ್ನು 2023ರಲ್ಲಿ ಎಸ್‌ಐಎ ಕಾಶ್ಮೀರಕ್ಕೆ ವರ್ಗಾಯಿಸಲಾಯಿತು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.