ADVERTISEMENT

ಬಿಹಾರ: ವಿಧಾನಸಭೆಗೆ ಜೈಲು ವಾಹನದಲ್ಲೇ ಬಂದ ಶಾಸಕ ಅನಂತ್ ಕುಮಾರ್ ಸಿಂಗ್!

ಪಿಟಿಐ
Published 3 ಫೆಬ್ರುವರಿ 2026, 14:45 IST
Last Updated 3 ಫೆಬ್ರುವರಿ 2026, 14:45 IST
ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಶಾಸಕ ಅನಂತ್ ಕುಮಾರ್ ಸಿಂಗ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರಿಗೆ ನಮಸ್ಕರಿಸಿದರು (ಪಿಟಿಐ ಚಿತ್ರ)
ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಶಾಸಕ ಅನಂತ್ ಕುಮಾರ್ ಸಿಂಗ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರಿಗೆ ನಮಸ್ಕರಿಸಿದರು (ಪಿಟಿಐ ಚಿತ್ರ)   

ಪಟ್ನಾ: ಮಾಜಿ ಭೂಗತ ದೊರೆ, ಹಾಲಿ ಜೆಡಿ(ಯು) ಶಾಸಕ ಅನಂತ್ ಕುಮಾರ್ ಸಿಂಗ್ ಅವರನ್ನು ಬಿಹಾರ ವಿಧಾನಸಭೆಗೆ ಮಂಗಳವಾರ ಜೈಲು ವಾಹನದಲ್ಲೆ ಕರೆತರಲಾಯಿತು.

ಗ್ಯಾಂಗ್‌ಸ್ಟರ್ ದುಲಾರ್ ಚಂದ್ ಯಾದವ್ ಹತ್ಯೆಗೆ ಸಂಬಂಧಿಸಿ ಕಳೆದ ವರ್ಷ ವಿಧಾನಸಭಾ ಚುನಾವಣೆಗೆ ಮುನ್ನ ಅನಂತ್ ಕುಮಾರ್ ಅವರನ್ನು ಬಂಧಿಸಲಾಗಿತ್ತು. ದುಲಾರ್ ಅವರು ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷದ ಸ್ಥಳೀಯ ಅಭ್ಯರ್ಥಿಯನ್ನು ಬೆಂಬಲಿಸಿದ್ದರು.

ಅಂದಿನಿಂದ ಜೈಲಿನಲ್ಲಿರುವ ‌ಅನಂತ್ ಸಿಂಗ್‌ ಅವರಿಗೆ ವಿಧಾನಸಭೆಗೆ ಪೆರೋಲ್ ಮೇಲೆ ತೆರಳಲು ಅವಕಾಶ ನೀಡಲಾಗಿದೆ.

ADVERTISEMENT

ಪ್ರಮಾಣ ವಚನ ಸ್ವೀಕರಿಸಿದ ನಂತರ ಅವರು ಮತ್ತೆ ಜೈಲು ವಾಹನವನ್ನು ಏರುವ ಮೊದಲು ತಮ್ಮ ನಾಯಕ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.