ADVERTISEMENT

ಜೆಇಇ ಅಡ್ವಾನ್ಸ್‌ ಫಲಿತಾಂಶ: ಮಹಾರಾಷ್ಟ್ರದ ಕಾರ್ತಿಕೇಯ ಪ್ರಥಮ

ಪಿಟಿಐ
Published 14 ಜೂನ್ 2019, 13:44 IST
Last Updated 14 ಜೂನ್ 2019, 13:44 IST
ಗುಪ್ತಾ ಕಾರ್ತಿಕೇಯ
ಗುಪ್ತಾ ಕಾರ್ತಿಕೇಯ   

ನವದೆಹಲಿ: ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ (ಐಐಟಿ) ಪ್ರವೇಶಾತಿ ಪಡೆಯಲು ನಡೆದ ಜಂಟಿ ಉನ್ನತ ಪ್ರವೇಶ ಪರೀಕ್ಷೆಯ (ಜೆಇಇ–ಅಡ್ವಾನ್ಸ್‌) ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು,ಮಹಾರಾಷ್ಟ್ರದ ಗುಪ್ತಾ ಕಾರ್ತಿಕೇಯ ಚಂದ್ರೇಶ್‌ ಪ್ರಥಮ ರ‍್ಯಾಂಕ್‌ ಗಳಿಸಿದ್ದಾರೆ.

ಗುಪ್ತಾ ಕಾರ್ತಿಕೇಯ372ಕ್ಕೆ 346 ಅಂಕ ಗಳಿಸಿದ್ದಾರೆ.

ಒಟ್ಟು1,61,319 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 38,705 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. 5,356 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.

ADVERTISEMENT

ಅಲಹಾಬಾದ್‌ನ ಹಿಂಮಾಶು ಗೌರವ್‌ ಸಿಂಗ್‌ ಎರಡನೇ ಹಾಗೂ, ದೆಹಲಿಯ ಅರ್ಚಿತ್‌ ಬುಬ್ನಾ ಮೂರನೇ ರ‍್ಯಾಂಕ್‌ ಗಳಿಸಿದ್ದಾರೆ. ವಿದ್ಯಾರ್ಥಿನಿಯರಲ್ಲಿಶಬ್ನಮ್ ಸಹಯ್ 372ಕ್ಕೆ 308 ಅಂಕ ಗಳಿಸುವ ಮೂಲಕ ಮೊದಲಿಗರಾಗಿದ್ದಾರೆ.

ಸಾಮಾನ್ಯ ವರ್ಗದ15,566 ವಿದ್ಯಾರ್ಥಿಗಳುಆರ್ಥಿಕವಾಗಿ ಹಿಂದುಳಿದ3,636 ವಿದ್ಯಾರ್ಥಿಗಳು,ಇತರ ಹಿಂದುಳಿದ ವರ್ಗ(ಒಬಿಸಿ) ವರ್ಗಕ್ಕೆ ಸೇರಿದ್ದ7,651 ವಿದ್ಯಾರ್ಥಿಗಳು,ಪರಿಶಿಷ್ಟ ಜಾತಿಯ8,758, ಪರಿಶಿಷ್ಟ ಪಂಗಡದ 3,094 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಐಐಟಿ ರೂರ್ಕಿ ಜೆಇಇ ಅಡ್ವಾನ್ಸ್‌ ಪ್ರವೇಶ ಪರೀಕ್ಷೆ ನಡೆಸಿತ್ತು. ದೇಶದ ವಿದ್ಯಾರ್ಥಿಗಳು ಸೇರಿದಂತೆ ವಿದೇಶಿಯ ವಿದ್ಯಾರ್ಥಿಗಳುಜೆಇಇ ಪರೀಕ್ಷೆ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.