ADVERTISEMENT

ಜಮ್ಮು: ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ 4 ಮಂದಿ ಉಗ್ರರ ಹತ್ಯೆ

ಪಿಟಿಐ
Published 21 ಜೂನ್ 2022, 18:02 IST
Last Updated 21 ಜೂನ್ 2022, 18:02 IST
ಪ್ರಾತಿನಿಧಿಕ ಚಿತ್ರ  
ಪ್ರಾತಿನಿಧಿಕ ಚಿತ್ರ     

ಶ್ರೀನಗರ (ಪಿಟಿಐ): ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಹಾಗೂ ಬಾರಾಮುಲ್ಲ ಜಿಲ್ಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳು ನಡೆದಿದ್ದು, ಘಟನೆಯಲ್ಲಿ ಜೈಷ್‌–ಎ–ಮಹಮದ್‌ ಉಗ್ರ ಸಂಘಟನೆಗೆ ಸೇರಿದ ಒಬ್ಬ ವ್ಯಕ್ತಿ ಸೇರಿದಂತೆ, ಒಟ್ಟು ನಾಲ್ಕು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ಬಾರಾಮುಲ್ಲ ಜಿಲ್ಲೆಯ ತುಲಿಬ‍ಲ್‌ ಗ್ರಾಮದಲ್ಲಿ ಭಯೋತ್ಪಾದಕರಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು, ಹುಡುಕಾಟ ಹಾಗೂ ಪತ್ತೆ ಕಾರ್ಯಾಚೆರಣೆ ನಡೆಸುವ ವೇಳೆ, ಉಗ್ರರು ಭದ್ರತಾ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ್ದಾರೆ. ಪ್ರತಿದಾಳಿ ನಡೆಸಿದ ಭದ್ರತಾ ಪಡೆಯ ಸಿಬ್ಬಂದಿ ಇಬ್ಬರು ಉಗ್ರರನ್ನು ಕೊಂದಿದ್ದಾರೆ’ ಎಂದು ಹೇಳಿದರು.

‘ಪುಲ್ವಾಮಾದ ತುಜ್ಜಾನ್‌ನಲ್ಲಿ ಸಹ ಎನ್‌ಕೌಂಟರ್‌ ನಡೆದಿದ್ದು, ಘಟನೆಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ’ ಎಂದು ಪೊಲೀಸ್‌ ವಕ್ತಾರರು ತಿಳಿಸಿದ್ದಾರೆ.

ADVERTISEMENT

‘ಎನ್‌ಕೌಂಟರ್‌ನಲ್ಲಿ ಸಾವಿಗೀಡಾದ ನಾಲ್ಕು ಭಯೋತ್ಪಾದಕರಲ್ಲಿ, ಒಬ್ಬನನ್ನುಜೈಷ್‌–ಎ–ಮಹಮದ್‌ ಉಗ್ರ ಸಂಘಟನೆಗೆ ಸೇರಿದ ಮಜಿದ್‌ ನಜಿರ್‌ ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ಸಾವಿಗೀಡಾದ ಸಬ್‌ಇನ್ಸ್ಪೆಕ್ಟರ್‌ ಫರೂಕ್‌ ಅಹ್ಮದ್‌ ಮಿರ್‌ ಅವರ ಹತ್ಯೆಯಲ್ಲಿ ಈತನೂ ಭಾಗಿಯಾಗಿದ್ದ’ ಎಂದು ಕಾಶ್ಮೀರದ ಐಜಿಪಿ ವಿಜಯ್‌ ಕುಮಾರ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.