ADVERTISEMENT

‘ಮತ’ ಪಡೆಯಲು ಅಬಕಾರಿ ಕಾನ್‌ಸ್ಟೆಬಲ್‌ಗಳ ನೇಮಕಾತಿ: ಶಿವರಾಜ್‌ ಸಿಂಗ್‌ ಚೌಹಾಣ್‌

ಕೇಂದ್ರ ಕೃಷಿ ಖಾತೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಆರೋಪ

ಪಿಟಿಐ
Published 8 ಸೆಪ್ಟೆಂಬರ್ 2024, 16:22 IST
Last Updated 8 ಸೆಪ್ಟೆಂಬರ್ 2024, 16:22 IST
ಶಿವರಾಜ್‌ ಸಿಂಗ್‌ ಚೌಹಾಣ್‌
ಶಿವರಾಜ್‌ ಸಿಂಗ್‌ ಚೌಹಾಣ್‌   

ರಾಂಚಿ (ಪಿಟಿಐ): ‘ಮತ ಪಡೆಯುವ ಉದ್ದೇಶದಿಂದಲೇ ಹೇಮಂತ್‌ ಸೊರೇನ್‌ ನೇತೃತ್ವದ ಜಾರ್ಖಂಡ್‌ ಸರ್ಕಾರವು ಅಬಕಾರಿ ಇಲಾಖೆಯಲ್ಲಿ ಕಾನ್‌ಸ್ಟೆಬಲ್‌ಗಳ ನೇಮಕಾತಿ ನಡೆಸಿತ್ತು. ಇದರಿಂದಾಗಿ, 12 ಮಂದಿ ಆಕಾಂಕ್ಷಿಗಳು ಬಲಿಯಾದರು’ ಎಂದು ಕೇಂದ್ರ ಕೃಷಿ ಖಾತೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಆರೋಪಿಸಿದರು.

ಜಾರ್ಖಂಡ್‌ನ ಬಿಜೆಪಿ ಉಸ್ತುವಾರಿಯೂ ಆಗಿರುವ ಚೌಹಾಣ್‌ ಅವರು ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ತಯಾರಿ ಸಂಬಂಧ ಸಭೆ ನಡೆಸಲು ಭಾನುವಾರ ರಾಂಚಿಗೆ ಬಂದಿಳಿದರು.

‘ಐದು ಲಕ್ಷ ಮಂದಿಗೆ ಉದ್ಯೋಗ ನೀಡುವುದಾಗಿ ಹೇಮಂತ್‌ ಸೊರೇನ್‌ ಅವರು ರಾಜ್ಯದ ಜನರಿಗೆ ಭರವಸೆ ನೀಡಿದ್ದರು. ಅದು ಈಡೇರಿಸರಿರಲಿಲ್ಲ. ಇದರಿಂದ ಯುವಕರು 10 ಕಿ.ಮೀ ಓಡಿದ್ದರಿಂದ, 12 ಮಂದಿ ಪ್ರಾಣ ಕಳೆದುಕೊಂಡರು. ಇಷ್ಟೊಂದು ದೂರ ಓಡುವ ವ್ಯವಸ್ಥೆ ದೇಶದ ಎಲ್ಲಿಯೂ ಇಲ್ಲ’ ಎಂದು ಇಲ್ಲಿನ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ADVERTISEMENT

ಆಗಸ್ಟ್ 22ರಂದು ಜಾರ್ಖಂಡ್‌ನ ಅಬಕಾರಿ ಇಲಾಖೆಯ ಕಾನ್‌ಸ್ಟೆಬಲ್‌ಗಳ ನೇಮಕಾತಿಯ ದೈಹಿಕ ಪರೀಕ್ಷೆ ವೇಳೆ ತೀವ್ರ ಅಸ್ವಸ್ಥರಾಗಿ 12 ಉದ್ಯೋಗ ಆಕಾಂಕ್ಷಿಗಳು ಮೃತಪಟ್ಟಿದ್ದರು. ಇದಾದ ಬಳಿಕ ನೇಮಕಾತಿ ಪ್ರಕ್ರಿಯೆಯನ್ನು ಹೇಮಂತ್‌ ಸೊರೇನ್‌ ಅಮಾನತುಗೊಳಿಸಿ ಆದೇಶಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.