ADVERTISEMENT

50 ಸಾವಿರ ಡೋಸ್ ಕೋವಿಡ್ ಲಸಿಕೆ ಪೂರೈಸಿ: ಕೇಂದ್ರ ಸರ್ಕಾರಕ್ಕೆ ಜಾರ್ಖಂಡ್ ಮನವಿ

ಪಿಟಿಐ
Published 7 ಏಪ್ರಿಲ್ 2023, 16:18 IST
Last Updated 7 ಏಪ್ರಿಲ್ 2023, 16:18 IST
   

ರಾಂಚಿ: ಕೋವಿಡ್‌–19 ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ ಜಾರ್ಖಂಡ್‌ ಆರೋಗ್ಯ ಸಚಿವ ಬನ್ನಾ ಗುಪ್ತ ಅವರು 50 ಸಾವಿರ ಡೋಸ್ ಕೋವಿಡ್‌ ಲಸಿಕೆ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೇಂದ್ರ ಸಚಿವ ಮನಸುಖ್‌ ಮಾಂಡವೀಯ ಅವರು ಕರೆದಿದ್ದ ಕೋವಿಡ್‌ ಪರಿಶೀಲನಾ ಸಭೆಗೆ ವರ್ಚುವಲ್‌ ಆಗಿ ಹಾಜರಾಗಿದ್ದ ವೇಳೆ ಗುಪ್ತ, ಲಸಿಕೆಯ ಬೇಡಿಕೆ ಇಟ್ಟಿದ್ದಾರೆ.

'ಜಾರ್ಖಂಡ್‌ನಲ್ಲಿ ಸದ್ಯ ಕೋವಿಡ್‌ ಲಸಿಕೆ ಲಭ್ಯವಿಲ್ಲ. ನಾವು ಎರಡು ವಾರಗಳ ಹಿಂದೆಯೇ ಕನಿಷ್ಠ 50 ಸಾವಿರ ಡೋಸ್‌ ಲಸಿಕೆ ಕಳುಹಿಸಿಕೊಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಆದರೆ, ಅದು ಇನ್ನೂ ಬಂದಿಲ್ಲ' ಎಂದು ಮಾಂಡವಿಯ ಅವರಿಗೆ ತಿಳಿಸಿದ್ದಾರೆ.

ADVERTISEMENT

ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಜಾರ್ಖಂಡ್‌ನಲ್ಲಿ 60 ಸಕ್ರಿಯ ಪ್ರಕರಣಗಳಿವೆ. ಸೌಮ್ಯ ಲಕ್ಷಣಗಳನ್ನು ಹೊಂದಿರುವ ಬಹುತೇಕ ಸೋಂಕಿತರು, ತಮ್ಮ ಮನೆಗಳಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನಸುಖ್‌ ಮಾಂಡವೀಯ ಅವರು, ಎಚ್ಚರದಿಂದ ಇರುವಂತೆ ಮತ್ತು ಸೋಂಕು ನಿರ್ವಹಣೆಗೆ ಸಜ್ಜಾಗಿರುವಂತೆ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.