ADVERTISEMENT

ಜಾರ್ಖಂಡ್‌ನ ಝಾರಿಯಾ ಅತ್ಯಂತ ಮಾಲಿನ್ಯ ನಗರ: ಗ್ರೀನ್‌ಪೀಸ್‌ ಇಂಡಿಯಾ ವರದಿ

ಪಿಟಿಐ
Published 22 ಜನವರಿ 2020, 12:15 IST
Last Updated 22 ಜನವರಿ 2020, 12:15 IST
   

ದೆಹಲಿ : ಜಾರ್ಖಂಡ್‌ನ ಝಾರಿಯಾ ನಗರವು ಭಾರತದ ಅತಿ ಹೆಚ್ಚು ವಾಯುಮಾಲಿನ್ಯ ನಗರವಾಗಿದೆಎಂದುಗ್ರೀನ್‌ಪೀಸ್‌ ಇಂಡಿಯಾ ವರದಿ ತಿಳಿಸಿದೆ.

ಕಲ್ಲಿದ್ದಲು ನಿಕ್ಷೇಪ ಮತ್ತು ಕಾರ್ಖಾನೆಗಳು ಹೆಚ್ಚಿರುವಜಾರ್ಖಂಡ್‌ನ ಧನಬಾದ್‌ ಎರಡನೇ ಅತಿ ಮಾಲಿನ್ಯ ನಗರವಾಗಿದೆ.

ವಾಯುಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದೆಹಲಿ ಅಲ್ಪ ಪ್ರಮಾಣದಲ್ಲಿ ಸುಧಾರಣೆ ಕಂಡಿದೆ ಎಂದು ವರದಿ ತಿಳಿಸಿದೆ. ಈ ಹಿಂದೆ ದೇಶದ ಎಂಟನೇ ಮಾಲಿನ್ಯ ನಗರವಾಗಿದ್ದ ದೆಹಲಿ, ಈ ಬಾರಿ 10ನೇ ಸ್ಥಾನ ಪಡೆದಿದೆ.

ADVERTISEMENT

ಮಿಜೊರಾಂನ ಲುಂಗ್ಲೆ ಅತ್ಯಂತ ಕಡಿಮೆ ಮಾಲಿನ್ಯ ನಗರವಾಗಿದ್ದು, ನಂತರದ ಸ್ಥಾನವನ್ನು ಮೇಘಾಲಯದ ಡೌಕಿ ಪಡೆದಿದೆ.

ಉತ್ತರಪ್ರದೇಶದ ನೊಯಿಡಾ, ಗಾಜಿಯಾಬಾದ್‌, ಬರೇಲಿ, ಅಲಹಾಬಾದ್‌, ಮೊರಾದಾಬಾದ್‌ ಮತ್ತು ಫಿರೊಜಾಬಾದ್‌ಮೊದಲ ಹತ್ತು ಮಾಲಿನ್ಯಗೊಂಡಿರುವ ನಗರವಾಗಿದೆ.

ದೇಶದ 287 ನಗರಗಳಪಿಎಂ 10 (ಪರ್ಟಿಕ್ಯುಲೇಟ್ ಮ್ಯಾಟರ್‌) ದತ್ತಾಂಶ ವಿಶ್ಲೇಷಣೆಯ ಆಧಾರದ ಮೇಲೆ ವರದಿ ಸಿದ್ಧಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.