ಬೆಂಗಳೂರು: ಕಪಿಲ್ ಸಿಬಲ್ ಅವರು ಕಾಂಗ್ರೆಸ್ ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಉತ್ತರ ಪ್ರದೇಶದ ಸಚಿವ ಜಿತಿನ್ ಪ್ರಸಾದ್ ಅವರು ಹೇಗಿದೆ 'ಪ್ರಸಾದ' ಸಿಬಲ್ ಅವರೇ? ಎಂದು ಕಾಲೆಳೆದಿದ್ದಾರೆ.
ಜಿತಿನ್ ಪ್ರಸಾದ್ ಅವರು ಬಿಜೆಪಿ ಸೇರ್ಪಡೆಗೊಂಡಾಗ ಟ್ವೀಟ್ ಮಾಡಿದ್ದ ಕಪಿಲ್ ಸಿಬಲ್, ಜಿತಿನ್ ಅವರಿಗೆ ಬಿಜೆಪಿಯಿಂದ 'ಪ್ರಸಾದ' ಸಿಗುತ್ತದೆಯೇ ಅಥವಾ ಕೇವಲ ಉತ್ತರ ಪ್ರದೇಶ ಚುನಾವಣೆಯ ಬಲೆಗೆ ಸಿಕ್ಕಿಬಿದ್ದರೇ? ಎಂದು ಪ್ರಶ್ನಿಸಿದ್ದರು.
'ಸಿದ್ಧಾಂತ'ವೆಂಬುದು ಪ್ರಮುಖವೆನಿಸದಿದ್ದಾಗ ಬದಲಾವಣೆ ಬಹಳ ಸುಲಭ ಎಂದು ಸಿಬಲ್ ವ್ಯಂಗ್ಯ ಮಾಡಿದ್ದರು.
ಇದೇ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಜಿತಿನ್ ಪ್ರಸಾದ್, ಹೇಗಿದೆ 'ಪ್ರಸಾದ'? ಎಂದು ಪ್ರಶ್ನಿಸಿದ್ದಾರೆ.
ರಾಜ್ಯಸಭೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಿಬಲ್ ಅವರ ಬೆನ್ನಿಗೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಬೆಂಬಲವಾಗಿ ನಿಂತಿದೆ.
ಕಳೆದ ವರ್ಷ ಜೂನ್ ತಿಂಗಳಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಜಿತಿನ್ ಪ್ರಸಾದ್ ಅವರು ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದಲ್ಲಿ ಲೋಕೋಪಯೋಗಿ ಖಾತೆ ಸಚಿವರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.