ADVERTISEMENT

ಅಮರನಾಥ ಯಾತ್ರೆ: ಹೆಚ್ಚಿನ ಭದ್ರತೆಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 20:00 IST
Last Updated 6 ಜೂನ್ 2019, 20:00 IST
   

ಶ್ರೀನಗರ: ಈ ಬಾರಿಯ ಅಮರನಾಥ ಯಾತ್ರೆ ಜುಲೈ 1ರಂದು ಆರಂಭವಾಗಲಿದ್ದು, ಭದ್ರತಾ ಕಾರ್ಯಗಳಿಗಾಗಿ ಹೆಚ್ಚುವರಿಯಾಗಿ 200 ಅರೆ ಸೇನಾಪಡೆಯ ತುಕಡಿಗಳನ್ನು ಒದಗಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದೆ.

ಈಗಾಗಲೇ ಸುಮಾರು 300 ತುಕಡಿಗಳು ಇಲ್ಲಿ ಬೀಡುಬಿಟ್ಟಿವೆ. ಈಗ ಹೆಚ್ಚುವರಿಯಾಗಿ 200 ತುಕಡಿಗಳಿಗೆ ಬೇಡಿಕೆ ಸಲ್ಲಿಸಲಾಗಿದೆ.ಚುನಾವಣೆ ಭದ್ರತೆಗೆ ನಿಯೋಜಿಸಿದ್ದ 300 ತುಕಡಿಗಳನ್ನು ಅಲ್ಲಿಯೇ ಉಳಿಸಿಕೊಳ್ಳಲು ಗೃಹಸಚಿವಾಲಯ ಕಳೆದ ತಿಂಗಳು ಸಮ್ಮತಿಸಿತ್ತು. ‘ಕೇಂದ್ರ ಗೃಹ ಸಚಿವಾಲಯ ಜೂನ್‌ 15ರಿಂದ ಪಡೆಗಳನ್ನು ನಿಯೋಜಿಸುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT