ADVERTISEMENT

ಮೋದಿ, ಅಮಿತ್ ಶಾ ಕಡೆಯ ಗೂಂಡಗಳಿಂದ ದಾಂದಲೆ: ಪ್ರಿಯಾಂಕಾ ಗಾಂಧಿ ಆರೋಪ

ಪಿಟಿಐ
Published 5 ಜನವರಿ 2020, 19:48 IST
Last Updated 5 ಜನವರಿ 2020, 19:48 IST
ಜೆಎನ್‌ಯು
ಜೆಎನ್‌ಯು   

ನವದೆಹಲಿ/ಅಲಿಗಡ:ಜೆಎನ್‌ಯು ಕ್ಯಾಂಪಸ್‌ನಲ್ಲಿ ಶಾಂತಿ ನೆಲೆಸಿದೆ ಎಂದು ಪೊಲೀಸರು ತಡರಾತ್ರಿ ತಿಳಿಸಿದರು. ಆದರೆ, ಜೆಎನ್‌ಯು ಆವರಣ ಹೊರಗಡೆ ಘಟನೆ ಖಂಡಿಸಿವಿದ್ಯಾರ್ಥಿಗಳ ಪ್ರತಿಭಟನೆಮಧ್ಯರಾತ್ರಿ ನಂತರವೂ ಮುಂದುವರಿದಿತ್ತು.

ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಏಮ್ಸ್‌ಗೆ ತೆರಳಿ ಗಾಯಗೊಂಡ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.

‘ಪ್ರಧಾನಿ ಮೋದಿ ಮತ್ತು ಗೃಹಸಚಿವ ಅಮಿತ್‌ಶಾ ಅವರ ಗೂಂಡಾಗಳು ವಿಶ್ವವಿದ್ಯಾಲಯಗಳಲ್ಲಿ ದಾಂದಲೆ ನಡೆಸಿ ವಿದ್ಯಾರ್ಥಿಗಳಲ್ಲಿ ಭೀತಿ ಮೂಡಿಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ದೆಹಲಿ ಪೊಲೀಸ್‌ ಆಯುಕ್ತರೊಂದಿಗೆ ಮಾತನಾಡಿರುವಅಮಿತ್‌ ಶಾ ಅವರು, ‘ಜೆಎನ್‌ಯು ಹಲ್ಲೆ ಪ್ರಕರಣ ಕುರಿತು ಹಿರಿಯ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸುವಂತೆ’ ಆದೇಶಿಸಿದ್ದಾರೆ.
ಅಲ್ಲದೆ ಜೆಎನ್‌ಯುನಲ್ಲಿನ ಸ್ಥಿತಿಗತಿಗಳ ಕುರಿತು ವರದಿ ನೀಡುವಂತೆ ಸೂಚಿಸಿದ್ದಾರೆ.

ಘಟನೆ ಖಂಡಿಸಿ ಉತ್ತರಪ್ರದೇಶದ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಹಾಗೂ ಹಳೆ ದೆಹಲಿಯ ಪೊಲೀಸ್ ಕೇಂದ್ರ ಕಚೇರಿ ಹೊರಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆದಿದೆ.

ಜೆಎನ್‌ಯುನಲ್ಲಿ ನಡೆದ ಹಿಂಸೆಯ ಬಗ್ಗೆ ತಿಳಿದುನನಗೆ ಅಚ್ಚರಿಯಾಗುತ್ತಿದೆ. ವಿದ್ಯಾರ್ಥಿಗಳ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಗಿದೆ. ಪೊಲೀಸರು ತಕ್ಷಣವೇ ಅಲ್ಲಿ ಹಿಂಸೆಯನ್ನು ತಡೆದು, ಶಾಂತಿ ಸ್ಥಾಪಿಸಬೇಕು. ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿಯೇ ವಿದ್ಯಾರ್ಥಿಗಳು ಸುರಕ್ಷಿತವಾಗಿಲ್ಲ ಎಂದಾದರೆ, ದೇಶ ಹೇಗೆ ಪ್ರಗತಿ ಕಾಣುತ್ತದೆ ಎಂದು ಅರವಿಂದ್‌ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.

ಅರವಿಂದ್ ಕೇಜ್ರಿವಾಲ್‌ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವ‌ಕ್ತಾರೆ ಸುಶ್ಮಿತಾ ದೇವ್, ’ಹಲ್ಲೆಯಿಂದ ಗಾಯಗೊಂಡಿರುವವರನ್ನು ನೋಡುವುದಕ್ಕಾಗಿ ನೀವು ಒಂದು ಆಸ್ಪತ್ರೆಯಲ್ಲಿರಬೇಕು ಇಲ್ಲವೇ, ವಿದ್ಯಾರ್ಥಿಗಳು ಪ್ರತಿಭಟಿಸುತ್ತಿರುವ ಜೆಎನ್‌ಯು ಗೇಟ್‌ ಬಳಿ ಇರಬೇಕು. ಇದು ನಿಮ್ಮ ನಗರ. ನೀವು ವಿಐಪಿ ರೀತಿಯಲ್ಲಿ ವರ್ತಿಸುತ್ತಿದ್ದೀರಿ. ಇದು ದುರದೃಷ್ಟಕರ’ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

‘ಗಾಯವಾಗಿದೆ. ಆದರೆ, ಎಂದಿಗೂ ಸೋಲುವುದಿಲ್ಲ. ನಾವು ಎನ್‌ಎನ್‌ಯು ವಿದ್ಯಾರ್ಥಿಗಳು’ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.