ADVERTISEMENT

ಜೆಎನ್‌ಯು: ಉಮರ್‌, ಶರ್ಜೀಲ್‌ ಜಾಮೀನು ಅರ್ಜಿಗೆ ದೆಹಲಿ ಪೊಲೀಸರ ವಿರೋಧ

ಸರ್ಕಾರ ಉರುಳಿಸುವ ಕೃತ್ಯದಲ್ಲಿ ಭಾಗಿ: ದೆಹಲಿ ಪೊಲೀಸ್

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 14:36 IST
Last Updated 30 ಅಕ್ಟೋಬರ್ 2025, 14:36 IST
–
   

ನವದೆಹಲಿ: ಜೆಎನ್‌ಯು ಮಾಜಿ ವಿದ್ಯಾರ್ಥಿಗಳಾದ ಉಮರ್‌ ಖಾಲಿದ್‌, ಶರ್ಜೀಲ್ ಇಮಾಮ್‌ ಮತ್ತು ಇತರರು ಸಲ್ಲಿಸಿರುವ ಜಾಮೀನು ಅರ್ಜಿಗಳಿಗೆ ದೆಹಲಿ ಪೊಲೀಸರು  ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ವಿರೋಧ ವ್ಯಕ್ತಪಡಿಸಿದರು.

‘ಸರ್ಕಾರ ಉರುಳಿಸುವ ಉದ್ದೇಶದಿಂದ ನಡೆದ ಕೃತ್ಯಗಳಲ್ಲಿ ಆರೋಪಿಗಳು ಭಾಗಿಯಾಗಿದ್ದರು. ತಮ್ಮ ದುರುದ್ದೇಶ ಸಾಧನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭವನ್ನು ಆಯ್ಕೆ ಮಾಡಿಕೊಂಡಿದ್ದರು. ಗಲಭೆ ಕುರಿತು ಜಗತ್ತಿನ ಗಮನ ಸೆಳೆಯುವ ಉದ್ದೇಶವನ್ನೂ ಹೊಂದಿದ್ದರು’ ಎಂದು ಪೊಲೀಸರು ಹೇಳಿದರು.

‘ದೇಶದಲ್ಲಿ ಭಾರಿ ಪ್ರಮಾಣದಲ್ಲಿ ಹತ್ಯೆಗಳನ್ನು ನಡೆಸಲು ಸಂಚು ರೂಪಿಸಲಾಗಿತ್ತು. ಇದಕ್ಕಾಗಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯನ್ನು ಬಳಸಿಕೊಂಡಿದ್ದರು’ ಎಂದೂ ಪೊಲೀಸರು ವಾದಿಸಿದರು.

ADVERTISEMENT

‘ದೇಶದಾದ್ಯಂತ ನಡೆದ ಗಲಭೆಗಳು ಹಠಾತ್ತನೇ ಭುಗಿಲೆದ್ದಿರಲಿಲ್ಲ. ಅವುಗಳು ಪೂರ್ವಯೋಜಿತ ಕೃತ್ಯಗಳಾಗಿದ್ದವು. ದೇಶದ ಸಾರ್ವಭೌಮತೆ ಹಾಗೂ ಸಮಗ್ರತೆ ಮೇಲೆ ಪ್ರಹಾರ ಮಾಡುವುದಕ್ಕಾಗಿಯೇ ಆರೋಪಿಗಳು ಈ ಸಂಚು ರೂಪಿಸಿದ್ದರು’ ಎಂದು ಪೊಲೀಸರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.