ADVERTISEMENT

ಜೆಎನ್‌ಯು ವಿದ್ಯಾರ್ಥಿಗಳಿಂದ ಸಂಸತ್ ಮುತ್ತಿಗೆ ಯತ್ನ

ಹಾಸ್ಟೆಲ್‌ ಶುಲ್ಕ ಹೆಚ್ಚಳ ರದ್ದುಪಡಿಸಲು ಒತ್ತಾಯ

ಪಿಟಿಐ
Published 18 ನವೆಂಬರ್ 2019, 19:04 IST
Last Updated 18 ನವೆಂಬರ್ 2019, 19:04 IST
ಸಂಸತ್ತಿನತ್ತ ಮೆರವಣಿಗೆಯಲ್ಲಿ ಬಂದ ಜೆಎನ್‌ಯು ವಿದ್ಯಾರ್ಥಿಗಳನ್ನು ಪೊಲೀಸರು ತಡೆದರು –ಪಿಟಿಐ ಚಿತ್ರ
ಸಂಸತ್ತಿನತ್ತ ಮೆರವಣಿಗೆಯಲ್ಲಿ ಬಂದ ಜೆಎನ್‌ಯು ವಿದ್ಯಾರ್ಥಿಗಳನ್ನು ಪೊಲೀಸರು ತಡೆದರು –ಪಿಟಿಐ ಚಿತ್ರ   

ನವದೆಹಲಿ: ಹಾಸ್ಟೆಲ್‌ ಶುಲ್ಕ ಹೆಚ್ಚಿಸಿದ ಸರ್ಕಾರದ ಕ್ರಮವನ್ನು ಖಂಡಿಸಿ ಮೂರು ವಾರಗಳಿಂದ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಸಾವಿರಾರು ವಿದ್ಯಾರ್ಥಿಗಳು ಸೋಮವಾರ ಸಂಸತ್ತಿನತ್ತ ಮೆರವಣಿಗೆ ನಡೆಸಿದರು.

ತಮ್ಮ ಬೇಡಿಕೆಯ ಬಗ್ಗೆ ಸರ್ಕಾರದ ಗಮನವನ್ನು ಸೆಳೆಯುವ ಸಲುವಾಗಿ ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನ ಅವರು ಸಂಸತ್ತಿಗೆ ಮುತ್ತಿಗೆ ಹಾಕಲು ಬಯಸಿದ್ದರು. ಆದರೆ ಅವರನ್ನು ಸಂಸತ್ತಿನಿಂದ ಅರ್ಧ ಕಿ.ಮೀ. ದೂರದಲ್ಲಿ ಪೊಲೀಸರು ತಡೆದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅನೇಕ ವಿದ್ಯಾರ್ಥಿ ನಾಯಕರನ್ನು ಪೊಲೀಸರು ಬಂಧಿಸಿದರು.

‘ಶುಲ್ಕ ಹೆಚ್ಚಳದಲ್ಲಿ ಸ್ವಲ್ಪ ಕಡಿತ ಮಾಡುವ ಮೂಲಕ ನಮಗೆ ಲಾಲಿಪಾಪ್‌ ನೀಡಲಾಗುತ್ತಿದೆ. ಶಿಕ್ಷಣ ಶ್ರೀಮಂತರಿಗೆ ಮಾತ್ರ ಎಟುಕುವಂತಾಗಬಾರದು. ಆದ್ದರಿಂದ ಶುಲ್ಕ ಹೆಚ್ಚಳದ ನಿರ್ಧಾರವನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು’ ಎಂದು ವಿದ್ಯಾರ್ಥಿನಿ ಪ್ರಿಯಾಂಕಾ ಒತ್ತಾಯಿಸಿದರು.

ADVERTISEMENT

ವಿದ್ಯಾರ್ಥಿಗಳು ಸಂಸತ್‌ ಕಟ್ಟಡದ ಸಮೀಪಕ್ಕೆ ಬರುವುದನ್ನು ತಡೆಯಲು, ದೆಹಲಿ ಮೆಟ್ರೊದಮೂರು ನಿಲ್ದಾಣಗಳಲ್ಲೊ ರೈಲುಗಳ ನಿಲುಗಡೆಯನ್ನು ಕೆಲವು ಗಂಟೆಗಳ ಕಾಲ ರದ್ದುಪಡಿಸಲಾಗಿತ್ತು.

ಸಿಪಿಎಂ ಖಂಡನೆ: ಪ್ರತಿಭಟನೆ ನಡೆಸಲು ಬಂದಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ತಡೆದಿರುವುದನ್ನು ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ಖಂಡಿಸಿದ್ದಾರೆ.

‘ಪೊಲೀಸರು ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತಿದ್ದಾರೆ. ಆದರೂ ಅವರು ಸಂಯಮ ಕಾಯ್ದುಕೊಂಡಿದ್ದಾರೆ. ಇದು ಮೋದಿಯ ತುರ್ತು ಪರಿಸ್ಥಿತಿ’ ಎಂದು ಯೆಚೂರಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.