ADVERTISEMENT

ಭ್ರಷ್ಟಾಚಾರ: ಜೆಎನ್‌ಯು ಪ್ರಾಧ್ಯಾಪಕ ಅಮಾನತು

ಪಿಟಿಐ
Published 3 ಫೆಬ್ರುವರಿ 2025, 21:31 IST
Last Updated 3 ಫೆಬ್ರುವರಿ 2025, 21:31 IST
ಜೆಎನ್‌ಯು
ಜೆಎನ್‌ಯು   

ನವದೆಹಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಪ್ರಾಧ್ಯಾಪಕ ರಾಜೀವ್‌ ಸಿಜಾರಿಯಾ ಅವರನ್ನು ಅಮಾನತುಗೊಳಿಸಿ ವಿ.ವಿಯ ಕುಲಪತಿ ಶಾಂತಿಶ್ರೀ ಪಂಡಿತ್‌ ಆದೇಶ ಹೊರಡಿಸಿದ್ದಾರೆ.

ಆಂಧ್ರಪ್ರದೇಶದ ಗುಂಟೂರಿನಲ್ಲಿರುವ ಕೋನೇರು ಲಕ್ಷ್ಮಯ್ಯ ಎಜುಕೇಷನ್‌ ಫೌಂಡೇಷನ್‌ಗೆ (ಕೆಎಲ್‌ಇಎಫ್‌) ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತಿನಿಂದ (ನ್ಯಾಕ್‌) ‘ಎ++ ಗ್ರೇಡ್‌’ ಕೊಡಿಸಲು ಲಂಚ ಪಡೆದ ಆರೋಪದ ಮೇರೆಗೆ ಸಿಬಿಐ ಶನಿವಾರ ಸಿಜಾರಿಯಾ ಸೇರಿದಂತೆ 10 ಮಂದಿಯನ್ನು ಬಂಧಿಸಿತ್ತು.

ಸಿಜಾರಿಯಾ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಕಾರಣ ಅವರನ್ನು ಅಮಾನತು ಮಾ‌ಡಲಾಗಿದೆ ಎಂದು ಕುಲಪತಿ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.