ADVERTISEMENT

ಜ್ಞಾನವಾಪಿ ಮಸೀದಿಯ ವಿಡಿಯೊ ಸಮೀಕ್ಷೆಗೆ ಆದೇಶಿಸಿದ್ದ ಜಡ್ಜ್‌ಗೆ ಬೆದರಿಕೆ ಪತ್ರ

ಪಿಟಿಐ
Published 8 ಜೂನ್ 2022, 1:12 IST
Last Updated 8 ಜೂನ್ 2022, 1:12 IST
ಜ್ಞಾನವಾಪಿ ಮಸೀದಿ ಆವರಣ
ಜ್ಞಾನವಾಪಿ ಮಸೀದಿ ಆವರಣ   

ವಾರಾಣಸಿ: ವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣದೊಳಗೆ ಸಮೀಕ್ಷೆ, ವಿಡಿಯೊ ಚಿತ್ರೀಕರಣ ಮಾಡುವಂತೆ ಆದೇಶ ನೀಡಿದ್ದ ಜಡ್ಜ್ ರವಿ ಕುಮಾರ್ ದಿವಾಕರ್ ಅವರಿಗೆ ಬೆದರಿಕೆ ಪತ್ರ ಬಂದಿದೆ. ಈ ಕುರಿತು ಅವರು ಮಂಗಳವಾರ ಉತ್ತರ ಪ್ರದೇಶ ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಖಾಸಿಫ್ ಅಹ್ಮದ್ ಸಿದ್ದಿಖಿ ಎಂಬ ವ್ಯಕ್ತಿಯು ‘ಆಗಜ್ ಮೂವ್‌ಮೆಂಟ್’ ಸಂಘಟನೆಯ ಪರವಾಗಿ ಕೈಬರಹದಲ್ಲಿ ಬರೆದಿರುವ ಬೆದರಿಕೆ ಪತ್ರ ರಿಜಿಸ್ಟರ್ ಪೋಸ್ಟ್ ಮೂಲಕ ತಮ್ಮ ಕೈಸೇರಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ), ಡಿಜಿಪಿ ಹಾಗೂ ವಾರಾಣಸಿಯ ಪೊಲೀಸ್ ಕಮಿಷನರೇಟ್‌ಗೆ ಪತ್ರದ ಮೂಲಕ ಜಡ್ಜ್ ಮಾಹಿತಿ ನೀಡಿದ್ದಾರೆ.

ಜಡ್ಜ್‌ಗೆ ಬೆದರಿಕೆ ಪತ್ರ ಬಂದಿರುವುದನ್ನು ವಾರಾಣಸಿ ಪೊಲೀಸ್ ಆಯುಕ್ತ ಎ. ಸತೀಶ್ ಗಣೇಶ್ ದೃಢಪಡಿಸಿದ್ದು, ಪೊಲೀಸ್ ಉಪ ಆಯುಕ್ತರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸದ್ಯ ಜಡ್ಜ್ ರವಿ ಕುಮಾರ್ ದಿವಾಕರ್ ಅವರ ಭದ್ರತೆಗೆ 9 ಮಂದಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.