ADVERTISEMENT

ನ್ಯಾಯಾಂಗಕ್ಕೆ ಸಂಪೂರ್ಣ ಸ್ವಾತಂತ್ರ್ಯವಿರಬೇಕು: ಸಿಜೆಐ ಎನ್‌.ವಿ. ರಮಣ

ಪಿಟಿಐ
Published 30 ಜೂನ್ 2021, 21:02 IST
Last Updated 30 ಜೂನ್ 2021, 21:02 IST
ಎನ್‌.ವಿ. ರಮಣ
ಎನ್‌.ವಿ. ರಮಣ   

ನವದೆಹಲಿ: ‘ನ್ಯಾಯಾಂಗಕ್ಕೆ ‘ಸಂಪೂರ್ಣ ಸ್ವಾತಂತ್ರ್ಯ’ವಿರಬೇಕು ಮತ್ತು ಅದನ್ನು ನೇರವಾಗಿ ಅಥವಾ ಪರೋಕ್ಷವಾಗಿ ಶಾಸಕಾಂಗ ಅಥವಾ ಕಾರ್ಯಾಂಗದಿಂದ ನಿಯಂತ್ರಿಸಬಾರದು. ಇಲ್ಲದಿದ್ದರೆ ಕಾನೂನಿನ ನಿಯಮ ಭ್ರಮೆಯಾಗುತ್ತದೆ’ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಬುಧವಾರ ಪ್ರತಿಪಾದಿಸಿದ್ದಾರೆ.

‘17ನೇ ನ್ಯಾಯಮೂರ್ತಿ ಪಿ.ಡಿ. ದೇಸಾಯಿ ಸ್ಮಾರಕ ಉಪನ್ಯಾಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಪ್ರವಹಿಸುತ್ತಿರುವ ಸಾರ್ವಜನಿಕ ಅಭಿಪ್ರಾಯದ ಭಾವನಾತ್ಮಕತೆಗೆ ನ್ಯಾಯಾಧೀಶರು ಪ್ರಭಾವಿತವಾಗಬಾರದು. ಸಾಮಾಜಿಕ ಮಾಧ್ಯಮ ಪ್ರವೃತ್ತಿಗಳು ನ್ಯಾಯಾಂಗದ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದರ ಬಗ್ಗೆಯೂ ನಾವು ಕಡ್ಡಾಯವಾಗಿ ಚರ್ಚಿಸುವ ಅಗತ್ಯವೂ ಇದೆ ಎಂದು ಅವರು ಇದೇ ಸಂದರ್ಭ ಅಭಿಪ್ರಾಯಪಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.