ADVERTISEMENT

ಹಸ್ತಕ್ಷೇಪ: ಸಮರ್ಥವಾಗಿ ಎದುರಿಸುತ್ತಿರುವ ನ್ಯಾಯಾಂಗ – ಯು.ಯು. ಲಲಿತ್‌

ಪಿಟಿಐ
Published 5 ಮಾರ್ಚ್ 2023, 14:13 IST
Last Updated 5 ಮಾರ್ಚ್ 2023, 14:13 IST
ಯು.ಯು. ಲಲಿತ್‌
ಯು.ಯು. ಲಲಿತ್‌   

ಕೋಲ್ಕತ್ತ: ‘ನ್ಯಾಯಾಂಗದಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನಗಳು ಆಗಾಗ ನಡೆಯುತ್ತಿದ್ದು, ಇದು ದೊಡ್ಡ ಸವಾಲಾಗಿದೆ. ಇದನ್ನು ಸಮರ್ಥವಾಗಿ ಎದುರಿಸುವ ಕೆಲಸ ನ್ಯಾಯಾಂಗದಿಂದ ಆಗುತ್ತಿದೆ’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್‌ ಹೇಳಿದ್ದಾರೆ.

ಭಾರತ್‌ ಚೇಂಬರ್‌ ಆಫ್‌ ಕಾಮರ್ಸ್‌ ಇಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 'ಪ್ರತಿಯೊಂದು ರೀತಿಯ ಒತ್ತಡ, ಆಕ್ರಮಣ ಮತ್ತು ಯಾವುದೇ ರೀತಿಯ ಹಸ್ತಕ್ಷೇಪಗಳನ್ನು ನಾವು ಸಹಿಸಿಕೊಳ್ಳಬೇಕು’ ಎಂದೂ ತಿಳಿಸಿದ್ದಾರೆ.

ಯಾವುದೇ ಶಕ್ತಿಯ ಬಾಹ್ಯ ಆಕ್ರಮಣಗಳನ್ನು ಎದುರಿಸಲು ನ್ಯಾಯಾಂಗದ ತೋಳುಗಳು ಬಲಿಷ್ಠವಾಗಿವೆ ಎಂದಿದ್ದಾರೆ.

ADVERTISEMENT

ನಿಷ್ಪಕ್ಷಪಾತ, ನ್ಯಾಯಸಮ್ಮತತೆ ಮತ್ತು ಸಮಂಜಸತೆಯು ನ್ಯಾಯಾಂಗದ ಸ್ವಾತಂತ್ರ್ಯದ ಲಕ್ಷಣಗಳು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.