ADVERTISEMENT

ನ್ಯಾಯದ ಬೆಳಕು ಎಲ್ಲರನ್ನೂ ತಲುಪಲಿ: ಸಿಜೆಐ ಗವಾಯಿ

ಪಿಟಿಐ
Published 8 ನವೆಂಬರ್ 2025, 16:01 IST
Last Updated 8 ನವೆಂಬರ್ 2025, 16:01 IST
   

ನವದೆಹಲಿ: ‘ನ್ಯಾಯವು ಕೆಲವರಿಗಾಗಿ ಮಾತ್ರ ಇರುವ ಸೌಲಭ್ಯವಲ್ಲ, ಬದಲಿಗೆ ಪ್ರತಿಯೊಬ್ಬ ಪ್ರಜೆಯ ಹಕ್ಕು’ ಎಂದು ಸು‍ಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್‌. ಗವಾಯಿ ಅಭಿಪ್ರಾಯಪಟ್ಟರು.

ಸುಪ್ರೀಂಕೋರ್ಟ್‌ನ ಆವರಣದಲ್ಲಿ ‘ಕಾನೂನು ನೆರವಿನ ವಿಧಾನಗಳನ್ನು ಬಲಪಡಿಸುವುದರ’ ಕುರಿತು ನಡೆದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. 

‘ನ್ಯಾಯದ ಬೆಳಕು’ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನೂ ತಲುಪುವಂತೆ ಮಾಡುವುದು ನ್ಯಾಯಾಧೀಶರು ಮತ್ತು ವಕೀಲರ ಕರ್ತವ್ಯ ಎನ್ನುವುದನ್ನು ಮರೆಯಬಾರದು. ನ್ಯಾಯವು ಜನಸಾಮಾನ್ಯರಲ್ಲಿ ವಿಶ್ವಾಸ ಹೆಚ್ಚಿಸಬೇಕು. ಎಲ್ಲೋ, ಯಾರೊ ನಮ್ಮ ಬೆಂಬಲಕ್ಕೆ ನಿಲ್ಲಲು ಸಿದ್ಧರಿದ್ದಾರೆ ಎಂಬ ಭರವಸೆಯನ್ನು ಅವರಲ್ಲಿ ಹುಟ್ಟುಹಾಕುವ ಮೂಲಕ ಜೀವನ ಬದಲಿಸುವ ಮಹತ್ತರ ಕೆಲಸವನ್ನು ಮಾಡಬೇಕು’ ಎಂದು ಅವರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.