
ಪಿಟಿಐ
ಹೈದರಾಬಾದ್: ಉಚ್ಚಾಟಿತ ಬಿಆರ್‌ಎಸ್ ನಾಯಕಿ ಕೆ. ಕವಿತಾ ಅವರು ವಿಧಾನ ಪರಿಷತ್ ಸದಸ್ಯತ್ವಕ್ಕೆ ನೀಡಿದ್ದ ರಾಜೀನಾಮೆಯನ್ನು ತೆಲಂಗಾಣ ವಿಧಾನ ಪರಿಷತ್‌ನ ಸಭಾಪತಿ ಗುತ್ತಾ ಸುಖಂದರ ರೆಡ್ಡಿ ಅವರು ಅಂಗೀಕರಿಸಿದ್ದಾರೆ.
ಕವಿತಾ ಅವರ ರಾಜೀನಾಮೆಯನ್ನು ಜನವರಿ 6ರಿಂದ ಜಾರಿಗೆ ಬರುವಂತೆ ಸಭಾಪತಿ ಅಂಗೀಕರಿಸಿದ್ದಾರೆ ಎಂದು ಪರಿಷತ್‌ನ ಕಾರ್ಯದರ್ಶಿ ಬುಧವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಅವರು ತಮ್ಮ ಸ್ಥಾನಕ್ಕೆ ಕಳೆದ ವರ್ಷದ ಸೆಪ್ಟೆಂಬರ್ 3ರಂದು ರಾಜೀನಾಮೆ ಸಲ್ಲಿಸಿದ್ದರು. ಆದರೆ ಅದನ್ನು ಅಂಗೀಕರಿಸಿರಲಿಲ್ಲ. ಕವಿತಾ ಅವರು ನಿಜಾಮಾಬಾದ್ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ 2021ರಲ್ಲಿ ವಿಧಾನ ಪರಿಷತ್ ಸದಸ್ಯೆಯಾಗಿ ಆಯ್ಕೆಯಾಗಿದ್ದರು.
2025ರ ಸೆಪ್ಟೆಂಬರ್‌ನಲ್ಲಿ ಕವಿತಾ ಅವರನ್ನು ಬಿಆರ್‌ಎಸ್ ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.