ADVERTISEMENT

ಯುವಕರ ಪ್ರಶ್ನೆಗಳನ್ನು ಹತ್ತಿಕ್ಕುವುದು ಸರಿಯಲ್ಲ: ಕಮಲ ಹಾಸನ್

ವಿದ್ಯಾರ್ಥಿಗಳ ಮೇಲೆ ಪೊಲೀಸ್ ಕ್ರಮಕ್ಕೆ ಸಂಬಂಧಿಸಿ ಪ್ರತಿಕ್ರಿಯೆ

ಏಜೆನ್ಸೀಸ್
Published 17 ಡಿಸೆಂಬರ್ 2019, 8:30 IST
Last Updated 17 ಡಿಸೆಂಬರ್ 2019, 8:30 IST
ಕಮಲ ಹಾಸನ್ (ಎಎನ್‌ಐ ಚಿತ್ರ)
ಕಮಲ ಹಾಸನ್ (ಎಎನ್‌ಐ ಚಿತ್ರ)   

ಚೆನ್ನೈ:ಯುವಕರ ಪ್ರಶ್ನೆಗಳನ್ನು ಹತ್ತಿಕ್ಕುವುದೆಂದರೆಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದರ್ಥ ಎಂದುನಟ, ರಾಜಕಾರಣಿ ಕಮಲ ಹಾಸನ್ ಹೇಳಿದ್ದಾರೆ.

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಕ್ರಮಕ್ಕೆ ಸಂಬಂಧಿಸಿಪ್ರತಿಕ್ರಿಯೆ ನೀಡಿದ ಅವರು, ‘ಯುವಕರು ರಾಜಕೀಯವಾಗಿ ಜಾಗೃತರಾಗಿರಬೇಕು. ಅವರು ಪ್ರಶ್ನೆ ಕೇಳಬೇಕು. ಅವರ ಪ್ರಶ್ನೆಗಳನ್ನು ಹತ್ತಿಕ್ಕಲಾಗುತ್ತಿದೆಎಂದರೆ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದರ್ಥ. ನಾನೂ ಒಬ್ಬ ವಿದ್ಯಾರ್ಥಿ (ನನ್ನ ಕ್ಷೇತ್ರದಲ್ಲಿ). ವಿದ್ಯಾರ್ಥಿಗಳ ಪರ ದನಿಯೆತ್ತುವುದನ್ನು ಮುಂದುವರಿಸಲಿದ್ದೇನೆ’ ಎಂದು ಹೇಳಿದ್ದಾರೆ.

ಪೌರತ್ವ (ತಿದ್ದುಪಡಿ) ಮಸೂದೆ ವಿರುದ್ಧದ ಹೋರಾಟವನ್ನು ಕಾನೂನು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲಿದ್ದೇವೆ ಎಂದೂ ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.