ADVERTISEMENT

ಸರ್ಕಾರ ಗಡಿಭಾಗದ ಮರಾಠಿ ಭಾಷಿಕರ ಜೊತೆ ನಿಲ್ಲಲಿದೆ: ಕೋಶಿಯಾರಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 16:18 IST
Last Updated 26 ಜನವರಿ 2023, 16:18 IST
ಭಗಂತ್‌ ಸಿಂಗ್‌ ಕೋಶಿಯಾರಿ 
ಭಗಂತ್‌ ಸಿಂಗ್‌ ಕೋಶಿಯಾರಿ    

ಮುಂಬೈ: ‘ರಾಜ್ಯ ಸರ್ಕಾರವು ಕರ್ನಾಟಕ–ಮಹಾರಾಷ್ಟ್ರ ಗಡಿ ಭಾಗದಲ್ಲಿ ನೆಲೆಸಿರುವ ಮರಾಠಿ ಭಾಷಿಕರ ಬೆನ್ನಿಗೆ ನಿಲ್ಲಲಿದೆ’ ಎಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಹೇಳಿದ್ದಾರೆ.

ದಾದರ್‌ನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್‌ ಮೈದಾನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಗಡಿ ಬಿಕ್ಕಟ್ಟು ಶಮನದ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರವು ತನ್ನ ನಿಲುವಿಗೆ ಬದ್ಧವಾಗಿರಲಿದೆ’ ಎಂದಿದ್ದಾರೆ.

‘ಗಡಿ ಭಾಗದ ಮರಾಠಿ ಭಾಷಿಕರ ಜೊತೆ ನಿಲ್ಲುವ ಪ್ರಸ್ತಾವನೆಯನ್ನು ಮಹಾರಾಷ್ಟ್ರ ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿದೆ. ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟಕ್ಕೆ ಬಲ ತುಂಬುವ ನಿಲುವಿಗೂ ಬದ್ಧವಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.