ADVERTISEMENT

ಕಾರ್ತಿ ಚಿದಂಬರಂಗೆ ಸೇರಿದ ₹54 ಕೋಟಿ ಮೌಲ್ಯದ ಸ್ವತ್ತು ಮುಟ್ಟುಗೋಲು

ಐಎನ್‌ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣ

ಪಿಟಿಐ
Published 11 ಅಕ್ಟೋಬರ್ 2018, 6:40 IST
Last Updated 11 ಅಕ್ಟೋಬರ್ 2018, 6:40 IST
ಕಾರ್ತಿ ಚಿದಂಬರಂ (ಸಂಗ್ರಹ ಚಿತ್ರ)
ಕಾರ್ತಿ ಚಿದಂಬರಂ (ಸಂಗ್ರಹ ಚಿತ್ರ)   

ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಸೇರಿದ ₹54 ಕೋಟಿ ಮೌಲ್ಯ ಸ್ವತ್ತುಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಮುಟ್ಟುಗೋಲು ಹಾಕಿಕೊಂಡಿದೆ. ಭಾರತ, ಬ್ರಿಟನ್ ಮತ್ತು ಸ್ಪೇನ್‌ನಲ್ಲಿ ಅವರು ಹೊಂದಿರುವ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಕಾರ್ತಿ ಅವರು ತಮಿಳುನಾಡಿನ ಕೊಡೈಕೆನಾಲ್, ಊಟಿಯಲ್ಲಿ ಹೊಂದಿರುವ ಸ್ವತ್ತುಗಳು ಮತ್ತು ದೆಹಲಿಯ ಜೊರ್‌ಬಾಘ್‌ನಲ್ಲಿರುವ ಫ್ಲ್ಯಾಟ್‌ ಅನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆ ಅನ್ವಯ ಮುಟ್ಟುಗೋಲು ಹಾಕಿಕೊಳ್ಳುವ ಸಲುವಾಗಿ ಜಾರಿ ನಿರ್ದೇಶನಾಲಯ ಆದೇಶ ಹೊರಡಿಸಿತ್ತು.

ಈ ಆದೇಶದ ಪ್ರಕಾರವೇ ಬ್ರಿಟನ್‌ನಲ್ಲಿ ಕಾರ್ತಿ ಹೊಂದಿರುವ ಕಾಟೇಜ್ ಮತ್ತು ಮನೆ, ಸ್ಪೇನ್‌ನ ಬಾರ್ಸಿಲೋನಾದಲ್ಲಿರುವ ಟೆನ್ನಿಸ್ ಕ್ಲಬ್ ಅನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.