ADVERTISEMENT

ಕಾಸರಗೋಡು: 29 ಜನರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 10:06 IST
Last Updated 19 ಜುಲೈ 2020, 10:06 IST

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ 29 ಜನರಲ್ಲಿ ಕೋವಿಡ್‌–19 ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿದೆ.

‘ಮೀಂಜದ ಆರು, ಕುಂಬಳೆಯ ಐವರು, ಚೆಂಗಳ ಮತ್ತು ಮಂಜೇಶ್ವರದ ತಲಾ ನಾಲ್ವರು, ಪುಲ್ಲೂರು, ಪೆರಿಯ, ಮಂಗಲ್ಪಾಡಿಯ ತಲಾ ಇಬ್ಬರು, ಬಳಾಲ್‌, ಕಾಸರಗೋಡು, ಮಧೂರು, ಕುತ್ತಿಕೋಲ್‌, ಕಾಞಂಗಾಡ್‌ ಮತ್ತು ಪುತ್ತಿಗೆಯ ತಲಾ ಒಬ್ಬರಿಗೆ ಕೋವಿಡ್‌ ಸೋಂಕು ತಗುಲಿರುವುದು ಖಚಿತಪಟ್ಟಿದೆ’ ಎಂದು ಕಾಸರಗೋಡು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎ.ವಿ.ರಾಮದಾಸ್‌ ತಿಳಿಸಿದ್ದಾರೆ.

ಜಿಲ್ಲೆ‌ ಒಂಭತ್ತು ಜನರು ಕೋವಿಡ್‌ ನಿಂದ ಗುಣಮುಖರಾಗಿ ಶನಿವಾರ ಆಸ್ಪತ್ರೆಗಳಿಂದ ಬಿಡುಗಡೆಯಾ ಗಿದ್ದಾರೆ. ಜಿಲ್ಲೆಯಲ್ಲಿ 334 ಸಕ್ರಿಯ ಪ್ರಕರಣಗಳಿವೆ. ಕಾಸರಗೋಡು ಜಿಲ್ಲೆಯಲ್ಲಿ 316, ಕಣ್ಣೂರಿನಲ್ಲಿ 17 ಮತ್ತು ಎರ್ನಾಕುಲಂನಲ್ಲಿ ಒಬ್ಬರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು
ಮಾಹಿತಿ ನೀಡಿದ್ದಾರೆ. ಕೋವಿಡ್‌ ಸೋಂಕು ನಿಯಂತ್ರಣಕ್ಕಾಗಿ ಕಾಸರಗೋಡು ಜಿಲ್ಲೆಯಲ್ಲಿ 5,946 ಜನರ ಮೇಲೆ ನಿಗಾ ಮುಂದು
ವರಿದಿದೆ. 5,648 ಜನರು ಹೋಂ ಕ್ವಾರಂಟೈನ್‌ನಲ್ಲಿದ್ದು, 298 ಜನರನ್ನು ಆಸ್ಪತ್ರೆಗಳಲ್ಲಿ ಐಸೋಲೇಷನ್‌ ವಾರ್ಡ್‌ ಗಳಲ್ಲಿ ನಿಗಾದಲ್ಲಿ ಇಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.