ADVERTISEMENT

ಹಿಜ್ಬುಲ್‌ ಮುಖ್ಯಸ್ಥ ಸೈಯದ್ ಸಲಾಹುದ್ದೀನ್‌ ಘೋಷಿತ ಅಪರಾಧಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 16:26 IST
Last Updated 15 ಏಪ್ರಿಲ್ 2025, 16:26 IST
<div class="paragraphs"><p>ಬಂಧನ ( ಸಾಂಕೇತಿಕ ಚಿತ್ರ)</p></div>

ಬಂಧನ ( ಸಾಂಕೇತಿಕ ಚಿತ್ರ)

   

ಶ್ರೀನಗರ: ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಮುಖ್ಯಸ್ಥ ಸೈಯದ್ ಸಲಾಹುದ್ದೀನ್‌ ಘೋಷಿತ ಅಪರಾಧಿ ಎಂದು ಕಾಶ್ಮೀರದ ನ್ಯಾಯಾಲಯವೊಂದು ಹೇಳಿದೆ. 2002ರ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈತ ಇನ್ನೊಂದು ತಿಂಗಳಲ್ಲಿ ವಿಚಾರಣೆಗೆ ಹಾಜರಾಗಬೇಕು ಎಂದು ಅದು ಹೇಳಿದೆ.

ಬುದ್ಗಾಂನ ಪ್ರಧಾನ ಸೆಷನ್ಸ್‌ ನ್ಯಾಯಾಧೀಶ ಓಂ ಪ್ರಕಾಶ್ ಭಗತ್ ಅವರು ಈ ಆದೇಶ ಹೊರಡಿಸಿದ್ದಾರೆ. ಸಲಾಹುದ್ದೀನ್‌ನ ನಿಜವಾದ ಹೆಸರು ಮೊಹಮ್ಮದ್ ಯೂಸುಫ್ ಶಾ. ಈತ ಎರಡು ದಶಕಕ್ಕೂ ಹೆಚ್ಚಿನ ಅವಧಿಯಿಂದ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದಾನೆ. ಈತ ಈಗ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇದ್ದಾನೆ ಎಂದು ನಂಬಲಾಗಿದೆ.

ADVERTISEMENT

ಬಂಧನ ವಾರಂಟ್‌ ತಲುಪಿಸಲು ಜಮ್ಮು ಮತ್ತು ಕಾಶ್ಮೀರದ ಪೊಲೀಸರಿಗೆ ಆಗದಿದ್ದ ಕಾರಣಕ್ಕೆ ನ್ಯಾಯಾಲಯ ಈ ಕ್ರಮ ಜರುಗಿಸಿದೆ.

ಈತನನ್ನು ಜಾಗತಿಕ ಭಯೋತ್ಪಾದಕ ಎಂದು ಅಮೆರಿಕವು 2017ರಲ್ಲಿ ಘೋಷಿಸಿದೆ. ಈತ ಬುದ್ಗಾಂನ ಒಂದು ಗ್ರಾಮಕ್ಕೆ ಸೇರಿದವ. 1994ರಲ್ಲಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸ್ಥಳಾಂತರ ಆದ ನಂತರದಲ್ಲಿ, ಭಯೋತ್ಪಾದನೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂಬ ಆರೋಪ ಇದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.