ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಹಿಮಪಾತಕ್ಕೆ ಸಿಲುಕಿದ್ದ ಇಬ್ಬರನ್ನು ರಕ್ಷಿಸಲಾಗಿದ್ದು, ಇನ್ನಿಬ್ಬರು ಮೃತಪಟ್ಟಿದ್ದಾರೆ. ಹೀಗಾಗಿ ಕಣಿವೆ ರಾಜ್ಯದಲ್ಲಿ ಹಿಮಪಾತ ಸಂಬಂಧಿತ ದುರಂತಗಳಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿದಂತಾಗಿದೆ.
ಸಿಂಥಾನ್ ಪಾಸ್‌ನಲ್ಲಿ ಶನಿವಾರ ರಾತ್ರಿ ಹಿಮಪಾತದಲ್ಲಿ ಸಿಲುಕಿಕೊಂಡಿದ್ದವರನ್ನು ರಕ್ಷಿಸಲಾಗಿದೆ. ಆದರೆ ಇವರಲ್ಲಿ ಇಬ್ಬರು ಮೃತಪಟ್ಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಶ್ಮೀರದ ಪರ್ವತ ಪ್ರದೇಶಗಳ್ಲಿ ಶುಕ್ರವಾರದಿಂದೀಚೆಗೆ ಹಿಮಪಾತ ಮತ್ತು ಮಳೆಯಾಗುತ್ತಿದೆ. ಇದರಿಂದ ಭೂಕುಸಿತವೂ ಸಂಭವಿಸಿದೆ. ಬಹುತೇಕ ಅಲೆಮಾರಿ ಜನಾಂಗದವರೇ ಇಂತಹ ದುರಂತಗಳಿಗೆ ಸಿಲುಕುತ್ತಿದ್ದಾರೆ.
ಗುಂಡೇಟಿಗೆ ನಾಗರಿಕ ಸಾವು: ಶೋಪಿಯಾನ್ ಜಿಲ್ಲೆಯ ಝೈನಾಪೋರ್ ಎಂಬಲ್ಲಿ ಭಾನುವಾರ ಗುಂಡೇಟಿನಿಂದ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ.
ಯಾರು ಗುಂಡು ಹಾರಿಸಿದ್ದು, ಎಂತಹ ಸನ್ನಿವೇಶ ನಿರ್ಮಾಣವಾಗಿತ್ತು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.