ADVERTISEMENT

ಕಾಂಗ್ರೆಸ್‌ನ ‘ಮತ ಕಳವು’ ಅಭಿಯಾನದ ವಿಡಿಯೊದಲ್ಲಿ ನಟಿಸಿಲ್ಲ ಎಂದ ಬಾಲಿವುಡ್‌ ನಟ

ಪಿಟಿಐ
Published 12 ಆಗಸ್ಟ್ 2025, 10:14 IST
Last Updated 12 ಆಗಸ್ಟ್ 2025, 10:14 IST
<div class="paragraphs"><p>ಕಾಂಗ್ರೆಸ್‌ ಪಕ್ಷದ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ‘ಮತ ಕಳವು’ ಅಭಿಯಾನದ ಪ್ರಚಾರಕ್ಕಾಗಿ ಬಳಸಿಕೊಂಡಿರುವ ಪ್ರಸಿದ್ಧ ವೆಬ್‌ ಸಿರೀಸ್‌ ‘ಸ್ಪೆಷಲ್‌ ಆಪ್ಸ್’ನ ತುಣುಕು</p></div>

ಕಾಂಗ್ರೆಸ್‌ ಪಕ್ಷದ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ‘ಮತ ಕಳವು’ ಅಭಿಯಾನದ ಪ್ರಚಾರಕ್ಕಾಗಿ ಬಳಸಿಕೊಂಡಿರುವ ಪ್ರಸಿದ್ಧ ವೆಬ್‌ ಸಿರೀಸ್‌ ‘ಸ್ಪೆಷಲ್‌ ಆಪ್ಸ್’ನ ತುಣುಕು

   

ನವದೆಹಲಿ: ಕಾಂಗ್ರೆಸ್‌ ಪಕ್ಷದ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ‘ಮತ ಕಳವು’ ಅಭಿಯಾನದ ಪ್ರಚಾರಕ್ಕಾಗಿ ಪ್ರಸಿದ್ಧ ವೆಬ್‌ ಸಿರೀಸ್‌ ‘ಸ್ಪೆಷಲ್‌ ಆಪ್ಸ್’ನ ತುಣುಕನ್ನು ತಮ್ಮ ಅನುಮತಿಯಿಲ್ಲದೆ ಬಳಸಿಕೊಂಡಿದೆ ಎಂದು ಬಾಲಿವುಡ್‌ ನಟ ಕೇ ಕೇ ಮೆನನ್‌ ಆರೋಪಿಸಿದ್ದಾರೆ.

ಸೋಮವಾರ ಕಾಂಗ್ರೆಸ್‌ ಪಕ್ಷದ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ‘ಸ್ಪೆಷಲ್‌ ಆಪ್ಸ್’ ವೆಬ್‌ ಸಿರೀಸ್‌ನ ಹಿಮ್ಮತ್ ಸಿಂಗ್ ಪಾತ್ರದ ಸಂಭಾಷಣೆಯೊಂದನ್ನು ಬಳಸಿಕೊಳ್ಳಲಾಗಿತ್ತು. ನಟ ಕೇ ಕೇ ಮೆನನ್‌ ಅವರು ಆ ಪಾತ್ರದಲ್ಲಿ ನಟಿಸಿದ್ದರು.

ADVERTISEMENT

ವಿಡಿಯೊದ ಆರಂಭದಲ್ಲಿ ನಟ ಮೆನನ್ ‘ನಿಲ್ಲಿ. ಸ್ಕ್ರೋಲ್‌ ಮಾಡುವುದನ್ನು ನಿಲ್ಲಿಸಿ. ನೀವು ಇದನ್ನು ನೋಡುತ್ತಿದ್ದರೆ, ಹಾಗಾದರೆ ಇದರ ಅರ್ಥವೇನು?’ ಎನ್ನುವ ತುಣುಕನ್ನು ವಿಡಿಯೊದಲ್ಲಿ ಬಳಸಿಕೊಳ್ಳಲಾಗಿದೆ.

ಅದರ ನಂತರ ವ್ಯಕ್ತಿಯೊಬ್ಬರು ‘ಮತ ಕಳವು’ ಅಭಿಯಾನದ ಪರವಾಗಿ ನಿಲ್ಲುವಂತೆ ಹಾಗೂ ಅಭಿಯಾನದಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.

ಪೋಸ್ಟ್‌ನ ಅಡಿ ಬರಹದಲ್ಲಿ ‘ಹಿಮ್ಮತ್ ಸಿಂಗ್ ಏನೋ ಹೇಳುತ್ತಿದ್ದಾರೆ, ಬೇಗ ತೆರಳಿ! ಅಭಿಯಾನಕ್ಕೆ ಸೇರಿಕೊಳ್ಳಿ..’ ಎಂದಿದೆ.

ಆ ಪೋಸ್ಟ್‌ಗೆ ಕಾಮೆಂಟ್‌ ಮಾಡಿರುವ ನಟ ಮೆನನ್, ‘ಸ್ಪೆಷಲ್‌ ಆಪ್ಸ್’ನ ಪ್ರಚಾರಕ್ಕಾಗಿ ಮಾಡಿರುವ ವಿಡಿಯೊವನ್ನು ನನ್ನ ಅನುಮತಿಯಿಲ್ಲದೆ ಬಳಸಿಕೊಳ್ಳಲಾಗಿದೆ. ಕಾಂಗ್ರೆಸ್‌ನ ‘ಮತ ಕಳವು’ ಅಭಿಯಾನದ ವಿಡಿಯೊದಲ್ಲಿ ನಾನು ನಟಿಸಿಲ್ಲ’ ಎಂದಿದ್ದಾರೆ.

ವೆಬ್‌ ಸಿರೀಸ್‌ನ ಪ್ರಚಾರಕ್ಕಾಗಿ ಮೂರು ವಾರಗಳ ಹಿಂದೆ ವಿಡಿಯೊ ತುಣುಕನ್ನು ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರ ಮಾಡಲಾಗಿತ್ತು. ಅದರಲ್ಲಿ ನಟ ಮೆನನ್ ಅವರು ವೀಕ್ಷಕರಲ್ಲಿ ತಮ್ಮ ವೆಬ್‌ ಸಿರೀಸ್‌ ನೋಡುವಂತೆ ಮನವಿ ಮಾಡಿದ್ದರು.

ಕಾಂಗ್ರೆಸ್‌ ಪಕ್ಷವು ಚುನಾವಣಾ ಆಯೋಗ ಹಾಗೂ ಬಿಜೆಪಿ ವಿರುದ್ಧ ‘ಮತ ಕಳವು’ ಅಭಿಯಾನ ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.