ADVERTISEMENT

ಕೇಜ್ರಿವಾಲ್ ಮುಖಕ್ಕೆ ಖಾರದ ಪುಡಿ ಎರಚಿದ್ದ ಆರೋಪಿಗೆ 14 ದಿನ ನ್ಯಾಯಾಂಗ ಬಂಧನ

ಏಜೆನ್ಸೀಸ್
Published 22 ನವೆಂಬರ್ 2018, 4:58 IST
Last Updated 22 ನವೆಂಬರ್ 2018, 4:58 IST
   

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಖಕ್ಕೆ ಖಾರದ ಪುಡಿ ಎರಚಿದ್ದ ಆರೋಪಿಗೆ 14 ದಿನದ ನ್ಯಾಯಾಂಗ ಬಂಧನದ ಶಿಕ್ಷೆ ವಿಧಿಸಲಾಗಿದೆ.

ರಾಜಧಾನಿಯ ತಿಸ್ ಹಜಾರಿ ನ್ಯಾಯಾಲಯವು ಬುಧವಾರ ಆರೋಪಿ ಅನಿಲ್ ಕುಮಾರ್ ಶರ್ಮಾನನ್ನು ವಿಚಾರಣೆ ನಡೆಸಿತು. ಮಂಗಳವಾರ ಪೊಲೀಸರು ಈತನನ್ನು ಬಂಧಿಸಿದ್ದರು.

ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಮಧ್ಯಾಹ್ನ ಕಚೇರಿಯಿಂದ ಹೊರಬರುತ್ತಿದ್ದ ವೇಳೆ ಅನಿಲ್ ಶರ್ಮಾ ಈ ದುಷ್ಕೃತ್ಯ ಎಸಗಿದ್ದನು.

ADVERTISEMENT

ಶರ್ಮಾ ದೂರು ದಾಖಲಿಸಲು ಕೇಜ್ರಿವಾಲ್ ಅವರ ಕಚೇರಿಗೆ ಹೋಗಿದ್ದನು. ದೂರಿನ ಪತ್ರ ನೀಡಿದ ನಂತರ ಪಾದ ಮುಟ್ಟುವಂತೆ ಮಾಡಿ ನಂತರ ಎದ್ದು ಕೇಜ್ರಿವಾಲ್ ಮುಖಕ್ಕೆ ಖಾರದ ಪುಡಿ ಎರಚಿದ್ದನು.

ಭಾರತೀಯ ದಂಡ ಸಂಹಿತೆ ಸೆಕ್ಷನ್ 186, 353 (ಸಾರ್ವಜನಿಕ ಸೇವಕನ ಮೇಲೆ ಹಲ್ಲೆ), 332 (ಕರ್ತವ್ಯದ ವೇಳೆ ಸಾರ್ವಜನಿಕ ವ್ಯಕ್ತಿಯನ್ನು ಸ್ವಯಂಪ್ರೇರಿತವಾಗಿನೋಯಿಸುವುದು), 506ರ ( ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.