ನವದೆಹಲಿ: ‘ಜನರಿಗೆ ನಾನು ಪ್ರಿಯ ವ್ಯಕ್ತಿ. ಜನರು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿ ಬಿಜೆಪಿಗೆ ಸಮಸ್ಯೆಯಾಗಿ ಪರಿಣಮಿಸಿದೆ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಂಗಳವಾರ ಹೇಳಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆ ಮತ್ತು ದೆಹಲಿ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕೇಜ್ರಿವಾಲ್ ‘ಬಿಜೆಪಿ ಅತ್ಯಂತ ಭ್ರಷ್ಟ ಪಕ್ಷ’ ಎಂದು ಆರೋಪಿಸಿದ್ದಾರೆ.
‘ಪಂಜಾಬ್ ವಿಧಾನಸಭಾ ಚುನಾವಣೆಗೂ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಕೇಜ್ರಿವಾಲ್ ಭಯೋತ್ಪಾದಕ ಎಂದರು. ಗೃಹ ಸಚಿವರು ತನಿಖೆ ಆರಂಭಿಸಿದರು. ಅನಂತರ ಏನಾಯಿತು?, ಈಗ ಗುಜರಾತ್ ಮತ್ತು ದೆಹಲಿ ಪಾಲಿಕೆ ಚುನಾವಣೆ ಸಮೀಪವಿರುವಾಗ ಅವರು ಕೇಜ್ರಿವಾಲ್ ಭ್ರಷ್ಟ ಎನ್ನುತ್ತಿದ್ದಾರೆ. ಕೇಜ್ರಿವಾಲ್ ಭ್ರಷ್ಟ ಅಥವಾ ಭಯೋತ್ಪಾದಕನಾಗಿದ್ದರೆ ಏಕೆ ಬಂಧಿಸುತ್ತಿಲ್ಲ? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
‘ಕೇಜ್ರಿವಾಲ್ ಭಯೋತ್ಪಾದಕನೂ ಅಲ್ಲ, ಭ್ರಷ್ಟನೂ ಅಲ್ಲ. ಕೇಜ್ರಿವಾಲ್ ಜನರ ಪ್ರೀತಿಯ ವ್ಯಕ್ತಿ. ಇದು ಬಿಜೆಪಿಗೆ ಸಮಸ್ಯೆಯಾಗಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.