ADVERTISEMENT

ಕೇಜ್ರಿವಾಲ್ ಶೀಘ್ರ ಜೈಲಿನಿಂದ ಬಿಡುಗಡೆ; ದೇಶದಲ್ಲಿ ಕ್ರಾಂತಿ ಸೃಷ್ಟಿ: ಭಗವಂತ ಮಾನ್

ಪಿಟಿಐ
Published 23 ಮಾರ್ಚ್ 2024, 9:27 IST
Last Updated 23 ಮಾರ್ಚ್ 2024, 9:27 IST
<div class="paragraphs"><p>ಭಗವಂತ ಮಾನ್ ಹಾಗೂ ಅರವಿಂದ ಕೇಜ್ರಿವಾಲ್</p></div>

ಭಗವಂತ ಮಾನ್ ಹಾಗೂ ಅರವಿಂದ ಕೇಜ್ರಿವಾಲ್

   

(ಪಿಟಿಐ ಸಂಗ್ರಹ ಚಿತ್ರ)

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬಂಧನಕ್ಕೆ ಒಳಗಾಗಿರುವ ಅರವಿಂದ ಕೇಜ್ರಿವಾಲ್ ಅವರು ಶೀಘ್ರದಲ್ಲೇ ಜೈಲಿನಿಂದ ಬಿಡುಗಡೆಯಾಗಲಿದ್ದು, ದೇಶದಲ್ಲಿ ಕ್ರಾಂತಿ ಸೃಷ್ಟಿಸಲಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್‌ ಶನಿವಾರ ಹೇಳಿದ್ದಾರೆ.

ADVERTISEMENT

55 ವರ್ಷದ ಅರವಿಂದ ಕೇಜ್ರಿವಾಲ್‌ ಅವರನ್ನು ದೆಹಲಿ ಅಬಕಾರಿ ನೀತಿ ಹಗರಣದ ಜೊತೆ ನಂಟಿರುವ ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಗುರುವಾರ ರಾತ್ರಿ ಬಂಧಿಸಿದ್ದರು. ಶುಕ್ರವಾರ ವಿಶೇಷ ನ್ಯಾಯಾಲಯವು ಕೇಜ್ರಿವಾಲ್ ಅವರನ್ನು ಮಾರ್ಚ್ 28ರವರೆಗೆ ಇ.ಡಿ ವಶಕ್ಕೆ ನೀಡಿದೆ.

'ದೇಶದಲ್ಲಿ ಸರ್ವಾಧಿಕಾರ ನಡೆಸಲು ಬಿಜೆಪಿ ಬಯಸುತ್ತಿದೆ. ವಿರೋಧ ಪಕ್ಷಗಳ ನಾಯಕರನ್ನು ಜೈಲಿಗೆ ಅಟ್ಟುವುದು ಸ್ವಾತಂತ್ರ್ಯವಲ್ಲ. ಎಲ್ಲರೂ ಒಂದಾಗೋಣ, ಇಲ್ಲದಿದ್ದರೆ ದೇಶವೇ ನಾಶವಾಗಲಿದೆ. ಜೈಲಿನಿಂದ ಹೊರಬರಲಿರುವ ಕೇಜ್ರಿವಾಲ್ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಲಿದ್ದಾರೆ' ಎಂದು ಅವರು ಹೇಳಿದ್ದಾರೆ.

ಕಾನೂನಿನ ಅಡಿಯಲ್ಲಿ ದೆಹಲಿ ಸರ್ಕಾರವನ್ನು ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

'ರಾಜಕೀಯ ದ್ವೇಷದಿಂದ ಜೈಲು ಸೇರಿದ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಯಾವ ಕಾನೂನು ಹೇಳುತ್ತಿಲ್ಲ. ಅವರು ಇ.ಡಿ ವಶದಲ್ಲಿದ್ದಾರೆ. ತಪ್ಪಿತ್ತಸ್ಥ ಎಂದು ಸಾಬೀತುಗೊಂಡಿಲ್ಲ. ಪ್ರತಿಯೊಬ್ಬ ಕಾರ್ಯಕರ್ತನೂ ಕೇಜ್ರಿವಾಲ್ ಆಗಿರುತ್ತಾನೆ' ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಈ ಕುರಿತು ಅಂತರರಾಷ್ಟ್ರೀಯ ಮಾಧ್ಯಮಗಳು ಸಹ ವರದಿ ಮಾಡಿವೆ ಎಂದು ಕೇಜ್ರಿವಾಲ್ ಉಲ್ಲೇಖಿಸಿದ್ದಾರೆ.

ಇವರು (ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ) ಉಕ್ರೇನ್ ಹಾಗೂ ರಷ್ಯಾ ನಡುವಣ ಯುದ್ಧ ನಿಲ್ಲಿಸಬೇಕು ಎಂದು ಮಾತನಾಡುತ್ತಾರೆ. ಆದರೆ ವಿಪಕ್ಷಗಳ ನಾಯಕರನ್ನೇ ಜೈಲಿಗೆ ಕಳುಹಿಸಲಾಗುತ್ತದೆ ಎಂದು ಮಾನ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.