ADVERTISEMENT

ಕೇರಳ: ವಿರಳ ಮಿದುಳು ಸೋಂಕಿಗೆ ಮತ್ತೊಬ್ಬರು ಬಲಿ

ಪಿಟಿಐ
Published 8 ಸೆಪ್ಟೆಂಬರ್ 2025, 13:53 IST
Last Updated 8 ಸೆಪ್ಟೆಂಬರ್ 2025, 13:53 IST
   

ಮಲಪ್ಪುರಂ (ಕೇರಳ): ಅತ್ಯಂತ ವಿರಳ ಮತ್ತು ಮಾರಣಾಂತಿಕ ಮಿದುಳು ಸೋಂಕಾದ ಅಮೀಬಿಕ್ ಮೆನಿಂಗೋಯೆನ್ಸ್‌ಫಾಲಿಟಿಸ್‌ ಕಾಯಿಲೆಗೆ ತುತ್ತಾಗಿ ಕೇರಳದಲ್ಲಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಆಗಸ್ಟ್‌ನಿಂದ ಈ ಕಾಯಿಲೆಗೆ ತುತ್ತಾಗಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ವಂದೂರು ಜಿಲ್ಲೆಯ 54 ವರ್ಷದ ಮಹಿಳೆ ಸೋಂಕಿನಿಂದಾಗಿ ಸೋಮವಾರ ಮೃತಪಟ್ಟರು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದರು.

ಶನಿವಾರ 45 ವರ್ಷ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಇದಕ್ಕೂ ಮುನ್ನ ಆಗಸ್ಟ್‌ನಲ್ಲಿ ಮೂವರು ಮೃತಪಟ್ಟಿದ್ದಾರೆ. ಸೋಂಕಿನ ಲಕ್ಷಣಗಳಿರುವ ಅನೇಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ADVERTISEMENT

ಸೋಂಕು ಹೆಚ್ಚುತ್ತಿರುವ ಕಾರಣ ಕೇರಳ ಆರೋಗ್ಯ ಇಲಾಖೆಯು ವಿಶೇಷ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.