ADVERTISEMENT

ಕೊಚ್ಚಿ–ಮಂಗಳೂರು ನೈಸರ್ಗಿಕ ಅನಿಲ ಪೈಪ್‌ಲೈನ್‌: ಭರವಸೆ ಈಡೇರಿಸಿದ್ದೇವೆ ಎಂದ ಸಿಎಂ

ಪಿಟಿಐ
Published 5 ಜನವರಿ 2021, 13:51 IST
Last Updated 5 ಜನವರಿ 2021, 13:51 IST
ಪಿಣರಾಯಿ ವಿಜಯನ್‌
ಪಿಣರಾಯಿ ವಿಜಯನ್‌   

ಕೊಚ್ಚಿ: ಕೊಚ್ಚಿ–ಮಂಗಳೂರು ನಡುವೆ ನೈಸರ್ಗಿಕ ಅನಿಲ ಪೈಪ್‌ಲೈನ್‌ ಪೂರ್ಣಗೊಂಡಿರುವುದನ್ನು ಶ್ಲಾಘಿಸಿದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ‘ಇದು ನಮ್ಮ ಸರ್ಕಾರದ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಪ್ರಮುಖವಾಗಿತ್ತು. ಇದರ ಯಶಸ್ಸು, ದಕ್ಷಿಣ ರಾಜ್ಯದಲ್ಲಿ ಉದ್ಯಮವನ್ನು ಹೇಗೆ ನಡೆಸಲಾಗುತ್ತದೆ ಎನ್ನುವುದಕ್ಕೆ ಇರುವ ಸಾಕ್ಷ್ಯ’ ಎಂದಿದ್ದಾರೆ.

‘2014ರಲ್ಲಿ ಹಲವು ಅಡೆತಡೆಗಳ ಕಾರಣ ಗೇಲ್‌ ಸಂಸ್ಥೆಯು ಯೋಜನೆಯನ್ನು ಸ್ಥಗಿತಗೊಳಿಸಿತ್ತು. 2016ರಲ್ಲಿ ನಾವು ಅಧಿಕಾರಕ್ಕೆ ಬಂದ ಬಳಿಕ ಈ ಅಡೆತಡೆಗಳನ್ನು ನಿವಾರಿಸಿದೆವು. ಗೇಲ್‌ ಸಂಸ್ಥೆಯೂ ಇದರಲ್ಲಿ ಕೈಜೋಡಿಸಿತ್ತು. ಒಟ್ಟಾರೆ 450 ಕಿ.ಮೀ. ಪೈಪ್‌ಲೈನ್‌ನಲ್ಲಿ 414 ಕಿ.ಮೀ. ಪೈಪ್‌ಲೈನ್‌ ಕೇರಳದಲ್ಲೇ ಇದೆ. ಈ ಯೋಜನೆಯು ಕೇರಳದ ಜನರ ಜೀವನಶೈಲಿಯ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಲಿದೆ’ ಎಂದು ವಿಜಯನ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT