ADVERTISEMENT

ಇಡುಕ್ಕಿ: ಸಂಬಾರ ಪದಾರ್ಥಗಳ ಪಾರ್ಕ್‌ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2023, 14:24 IST
Last Updated 14 ಅಕ್ಟೋಬರ್ 2023, 14:24 IST
ಪಿಣರಾಯಿ ವಿಜಯನ್‌
ಪಿಣರಾಯಿ ವಿಜಯನ್‌   

ಇಡುಕ್ಕಿ(ಪಿಟಿಐ): ಇಲ್ಲಿನ ತೊಡುಪುಳದಲ್ಲಿ ನಿರ್ಮಿಸಿರುವ ಸಂಬಾರ ಪದಾರ್ಥಗಳ ಪಾರ್ಕ್‌ ಅನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಶನಿವಾರ ಉದ್ಘಾಟಿಸಿದರು.

ಸಂಬಾರ ಪದಾರ್ಥಗಳ ಸಂಸ್ಕರಣೆಗೆ ಮತ್ತು ಅವುಗಳ ಉತ್ಪ‍ನ್ನಗಳ ಮೌಲ್ಯವರ್ಧನೆಗೆ ಉತ್ತೇಜನ ನೀಡಲಾಗುವುದು ಎಂದು ಅವರು ಹೇಳಿದರು.

ತೊಡುಪುಳದ ಮುಟ್ಟಂ ಗ್ರಾಮದಲ್ಲಿರುವ 15.29 ಎಕರೆ ವ್ಯಾಪ್ತಿಯ ಸಂಬಾರ ಪದಾರ್ಥಗಳ ಪಾರ್ಕ್‌ನ ಮೊದಲ ಹಂತದ ಕಾಮಗಾರಿಗಳನ್ನು ಕೇರಳ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮವು ಪೂರ್ಣಗೊಳಿಸಿದೆ ಎಂದು ಪಿಣರಾಯಿ ವಿಜಯನ್‌ ಅವರು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ADVERTISEMENT

ಎರಡನೇ ಹಂತದ ಕಾಮಗಾರಿಯು ಆರಂಭಗೊಂಡಿದೆ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.