ADVERTISEMENT

ಕೋವಿಡ್ ಪ್ರಸರಣ ತಡೆಗೆ ಸಹಕರಿಸದವರಿಗೆ ಉಚಿತ ಚಿಕಿತ್ಸೆ ಇಲ್ಲ: ಕೇರಳ ಸಿಎಂ ಪಿಣರಾಯಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ನವೆಂಬರ್ 2021, 15:47 IST
Last Updated 30 ನವೆಂಬರ್ 2021, 15:47 IST
ಪಿಣರಾಯಿ ವಿಜಯನ್
ಪಿಣರಾಯಿ ವಿಜಯನ್   

ತಿರುವನಂತಪುರ: ಕೋವಿಡ್–19 ಸೋಂಕು ಹರಡದಂತೆ ತಡೆಯಲು ಕೈಗೊಳ್ಳಲಾಗಿರುವ ಕ್ರಮಗಳಿಗೆ ಸಹಕಾರ ನೀಡದವರಿಗೆ ಉಚಿತ ಚಿಕಿತ್ಸೆ ನೀಡುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಇನ್ನೂ ಲಸಿಕೆ ಪಡೆದುಕೊಳ್ಳದ ಶಿಕ್ಷಕರು ಮತ್ತು ಉದ್ಯೋಗಿಗಳ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ಕೋವಿಡ್ ತಡೆಗೆ ಕೈಗೊಳ್ಳಲಾಗಿರುವ ಕ್ರಮಗಳಿಗೆ ಸಹಕರಿಸದವರಿಗೆ ಉಚಿತ ಚಿಕಿತ್ಸೆ ನೀಡುವುದಿಲ್ಲ. ಲಸಿಕೆ ಪಡೆದುಕೊಳ್ಳದ ಶಿಕ್ಷಕರು ಮತ್ತು ಉದ್ಯೋಗಿಗಳು ಕಚೇರಿಗೆ ಹಾಜರಾಗಿ ಕೆಲಸ ಮಾಡುತ್ತಿದ್ದರೆ ಅಥವಾ ಸಾರ್ವಜನಿಕರೊಂದಿಗೆ ಬೆರೆಯುತ್ತಿದ್ದರೆ ಕಡ್ಡಾಯವಾಗಿ ಪ್ರತಿ ವಾರ ಆರ್‌ಟಿ–ಪಿಸಿಆರ್ ಪರೀಕ್ಷೆ ಮಾಡಿ ವರದಿ ಸಲ್ಲಿಸಬೇಕು. ಈ ಪರೀಕ್ಷೆಗೆ ಹಣವನ್ನು ಅವರೇ ಪಾವತಿಸಬೇಕು. ಎಲ್ಲರ ಸುರಕ್ಷತೆಗಾಗಿ ಈ ಕ್ರಮ ಎಂದು ಪಿಣರಾಯಿ ವಿಜಯನ್ ಹೇಳಿರುವುದಾಗಿ ‘ಎಎನ್‌ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.