ADVERTISEMENT

ಬಿಕ್ಕಟ್ಟಿನಲ್ಲಿ ಕೇರಳ ಕಾಂಗ್ರೆಸ್‌ (ಎಂ)

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 19:24 IST
Last Updated 17 ಜೂನ್ 2019, 19:24 IST

ತಿರುವನಂತಪುರ: ಕೇರಳದ ಪ್ರಮುಖ ಪ್ರಾದೇಶಿಕ ಪಕ್ಷವಾಗಿರುವ ಕೇರಳ ಕಾಂಗ್ರೆಸ್‌ನಲ್ಲಿ (ಎಂ) ಬಿಕ್ಕಟ್ಟು ಸೃಷ್ಟಿಯಾಗಿದೆ.

ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ನ ಜೊತೆ ಗುರುತಿಸಿಕೊಂಡಿರುವ ಈ ಪಕ್ಷವು ಮಧ್ಯ ಕೇರಳದ ಕ್ರೈಸ್ತ ಸಮುದಾಯದ ಮೇಲೆ ಪ್ರಭಾವ ಹೊಂದಿದೆ.

ಆರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದ್ದು, ಸಿಪಿಎಂ ನೇತೃತ್ವದ ಎಲ್‌ಡಿಎಫ್‌ನತ್ತ ಐವರು ಶಾಸಕರನ್ನು ಹೊಂದಿರುವ ಕೇರಳ ಕಾಂಗ್ರೆಸ್‌(ಎಂ) ಪಕ್ಷ ಒಲವು ತೋರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬಿಕ್ಕಟ್ಟು ಪರಿಹಾರಕ್ಕೆ ಕಾಂಗ್ರೆಸ್‌ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಪಕ್ಷದ ಅಧ್ಯಕ್ಷರಾಗಿದ್ದ ಕೆ. ಎಂ.ಮಾಣಿ ಅವರು ಏಪ್ರಿಲ್‌ನಲ್ಲಿ ನಿಧನರಾದ ಬಳಿಕ ಪಕ್ಷದಲ್ಲಿ ಭಿನ್ನಮತ ತಲೆದೋರಿತ್ತು.

ADVERTISEMENT

ನೂತನ ಅಧ್ಯಕ್ಷರಾಗಿ ಕೆ.ಎಂ. ಮಾಣಿ ಅವರ ಪುತ್ರ ಜೋಸ್‌ ಕೆ. ಮಾಣಿ ಅವರನ್ನು ಆಯ್ಕೆ ಮಾಡುವುದಕ್ಕೆ ಇಡುಕ್ಕಿಯ ನ್ಯಾಯಾಲಯ ಸೋಮವಾರ ತಡೆಯಾಜ್ಞೆ ನೀಡಿದೆ. ಜೋಸ್‌ ಅವರನ್ನು ಕಾನೂನು ಬಾಹಿರವಾಗಿ ಆಯ್ಕೆ ಮಾಡಲಾಗುತ್ತಿದ್ದು, ಇದಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಪಕ್ಷದ ಮುಖಂಡ ಪಿ.ಜೆ. ಜೋಸೆಫ್‌ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.