ADVERTISEMENT

ಕೇರಳದ ಈ ಜೋಡಿ ರೂಪಿಸಿದ ‘ಕೆಮಿಸ್ಟ್ರಿ’ ಇನ್‌ವಿಟೇಶನ್ ವೈರಲ್ ಆಯ್ತು

ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 1:54 IST
Last Updated 15 ಡಿಸೆಂಬರ್ 2018, 1:54 IST
   

ಬೆಂಗಳೂರು:ಕೇರಳದಜೋಡಿ ರೂಪಿಸಿರುವ ವಿವಾಹ ಆಮಂತ್ರಣ ಪತ್ರಿಕೆ (ಇನ್‌ವಿಟೇಶನ್) ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈಚೆಗಷ್ಟೇಮದುವೆಯಾದ ವಿಥುನ್ ಮತ್ತು ಸೂರ್ಯ ರಸಾಯನಶಾಸ್ತ್ರದ ತತ್ವಗಳನ್ನೇ ಆಧರಿಸಿ ಇನ್‌ವಿಟೇಶನ್ ರೂಪಿಸಿಕೊಂಡಿದ್ದರು.

‘ಆಟಮ್‌ಗಳಾಗಿರುವ ವಿಥುನ್ ಮತ್ತು ಸೂರ್ಯ ಪೋಷಕರಿಂದ ಎನರ್ಜಿ ಪಡೆದು ಮಾಲಿಕ್ಯೂಲ್‌ಗಳಾಗಲು ನಿರ್ಧರಿಸಿದ್ದಾರೆ. ಈ ಜೋಡಿ ಜೊತೆಗೂಡುವ ಸಮಾರಂಭದಲ್ಲಿ ನಿಮ್ಮ ಉಪಸ್ಥಿತಿಯನ್ನು ಕೋರುತ್ತೇವೆ’ (The atoms Vithun and Soorya have decided to become a molecule with the activation energies of both parents. Requesting your latency with your reactants and products on the bonding ceremony). ಎನ್ನುವ ಒಕ್ಕಣೆ ಇನ್‌ವಿಟೇಶನ್‌ನಲ್ಲಿ ಇದೆ.

ಮದುವೆ ದಿನಾಂಕವನ್ನು ‘ರಿಯಾಕ್ಷನ್ ಆನ್’ ಎಂದು,ವಿವಾಹ ನಡೆಯುವ ಸ್ಥಳವನ್ನು ‘ಲ್ಯಾಬೊರೇಟರಿ’ ಎಂದು ನಮೂದಿಸಲಾಗಿದೆ. ಅವರಿಬ್ಬರ ಪ್ರೀತಿಯನ್ನು ಬಿಂಬಿಸುವ ನಕಾಶೆಯನ್ನೂ ಅಣು ವಿಜ್ಞಾನದ ಮಾದರಿಯಲ್ಲೇ ರೂಪಿಸಿರುವ ವಿಶೇಷ.

ADVERTISEMENT

ಕಾಂಗ್ರೆಸ್ ನಾಯಕ ಶಶಿ ತರೂರ್ ಸೇರಿದಂತೆ ನೂರಾರು ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಈಇನ್‌ವಿಟೇಶನ್‌ ಶೇರ್ ಮಾಡಿಕೊಂಡು, ಹೊಸ ಜೋಡಿಗೆ ಶುಭ ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.