ADVERTISEMENT

ಅತ್ಯಾಚಾರ: ಅಪರಾಧಿಗೆ ಒಟ್ಟು 45 ವರ್ಷ ಸಜೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 13:22 IST
Last Updated 22 ಫೆಬ್ರುವರಿ 2024, 13:22 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಇಡುಕ್ಕಿ, ಕೇರಳ: 14 ವರ್ಷ ವಯಸ್ಸಿನ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದ 80 ವರ್ಷ ವಯಸ್ಸಿನ ಅಪರಾಧಿಗೆ ಸ್ಥಳೀಯ ತ್ವರಿತ ವಿಚಾರಣೆಯ ವಿಶೇಷ ನ್ಯಾಯಾಲಯವು ಒಟ್ಟು 45 ವರ್ಷ ಅವಧಿ ಸಜೆ ವಿಧಿಸಿದೆ.

ನ್ಯಾಯಾಧೀಶರಾದ ಟಿ.ಜಿ.ವರ್ಗೀಸ್ ಅವರು, ಅಪರಾಧಿಗೆ ಪೋಕ್ಸೊ ಕಾಯ್ದೆಯಡಿ ಸಜೆ ವಿಧಿಸಿ ಆದೇಶ ಹೊರಡಿಸಿದರು ಎಂದು ವಿಶೇಷ ಅಭಿಯೋಜಕ (ಎಸ್‌ಪಿಪಿ) ಶಿಜೊ ಮೊನ್ ಜೋಸೆಫ್ ಅವರು ಇಲ್ಲಿ ತಿಳಿಸಿದರು. 

ADVERTISEMENT

ಜೈಲು ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬೇಕಾದ ಕಾರಣ ಅಪರಾಧಿ ಅನುಭವಿಸಲಿರುವ ಗರಿಷ್ಠ ಸಜೆ ಅವಧಿಯು 20 ವರ್ಷಗಳಾಗಿವೆ. ಅಂದರೆ, ಆತನು 20 ವರ್ಷ ಜೈಲಿನಲ್ಲಿಯೇ ಕಳೆಯಬೇಕಾಗಿದೆ ಎಂದು ಎಸ್‌ಪಿಪಿ ವಿವರಿಸಿದರು.

ಅಲ್ಲದೆ, ಅಪರಾಧಿಗೆ ₹ 60 ಸಾವಿರ ದಂಡವನ್ನು ಕೋರ್ಟ್ ವಿಧಿಸಿದೆ. ಈ ಮೊತ್ತವನ್ನು ವಸೂಲು ಮಾಡಿ, ಸಂತ್ರಸ್ತೆಗೆ ನೀಡಬೇಕು ಎಂದು ತಿಳಿಸಿದೆ. ಕೃತ್ಯ 2021ರಲ್ಲಿ ನಡೆದಿದ್ದು, ಅಂಗಡಿ ಬಳಿಯೇ ವಾಸವಿದ್ದ ಬಾಲಕಿ ಮನೆಯಲ್ಲಿ ಏಕಾಂಗಿಯಾಗಿದ್ದಾಗ ಕೃತ್ಯ ಎಸಗಿದ್ದನು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.