ADVERTISEMENT

ಪೋಷಕರೇ ನನ್ನ ಮಗುವನ್ನು ಅಪಹರಿಸಿದ್ದಾರೆ: ಕೇರಳದ ಸಿಪಿಎಂ ನಾಯಕರ ಪುತ್ರಿ ದೂರು

ಪಿಟಿಐ
Published 21 ಅಕ್ಟೋಬರ್ 2021, 11:12 IST
Last Updated 21 ಅಕ್ಟೋಬರ್ 2021, 11:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ನನ್ನ ಮಗುವನ್ನು ಹುಟ್ಟಿದ ಕೂಡಲೇ ಪೋಷಕರು ಅಪಹರಿಸಿದ್ದಾರೆ ಎಂದು ಆರೋಪಿಸಿರುವ ಸಿಪಿಎಂನ ಹಿರಿಯ ನಾಯಕಪಿ.ಎಸ್. ಜಯಚಂದ್ರನ್ ಅವರ ಪುತ್ರಿ ಅನುಪಮಾ ಎಸ್.ಚಂದ್ರನ್‌, ಮಗುವನ್ನು ವಾಪಸ್ ಕೊಡಿಸುವಂತೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.

‘ಕಳೆದ ಏಪ್ರಿಲ್‌ನಿಂದ ಹಲವು ಬಾರಿ ಪೊಲೀಸರಿಗೆ ದೂರು ನೀಡಿದ್ದೇನೆ. ಆದರೆ, ಪೊಲೀಸರು ಜಯಚಂದ್ರನ್ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಲು ಹಿಂಜರಿಯುತ್ತಿದ್ದಾರೆ‘ ಎಂದು ಅನುಪಮಾ ಆರೋಪಿಸಿದ್ದಾರೆ.‌

ಇದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸರು, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಪಮಾ ಅವರ ಪೋಷಕರು, ಸಹೋದರಿ ಮತ್ತು ಪತಿ ಮತ್ತು ತಂದೆಯ ಇಬ್ಬರು ಸ್ನೇಹಿತರು ಸೇರಿದಂತೆ ಆರು ಮಂದಿ ವಿರುದ್ಧ ಮಂಗಳವಾರ ಪ್ರಕರಣ ದಾಖಲಿಸಲಾಗಿದೆ. ಕಾನೂನು ವಿಭಾಗದಿಂದ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದ ಕಾರಣ, ದೂರು ದಾಖಲಿಸುವುದು ವಿಳಂಬವಾಯಿತು ಎಂದು ಹೇಳಿದ್ದಾರೆ.

ADVERTISEMENT

ಬಂಧಿತರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಪಕ್ಷದ ಹಿರಿಯ ನಾಯಕರಿಗೆ ದೂರು ಸಲ್ಲಿಸಿದ್ದರೂ, ಮಗುವನ್ನು ಮರಳಿ ಕೊಡಿಸಲು ನನಗೆ ಯಾರೂ ಸಹಾಯ ಮಾಡಿಲ್ಲ‘ ಎಂದುಅನುಪಮಾ ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.