ತಿರುವನಂತಪುರ: ಪ್ರಸಿದ್ಧ ಶಬರಿಮಲೆ ದೇವಸ್ಥಾನದ ತೀರ್ಥ ಪ್ರಸಾದವನ್ನು ಹ್ಯಾಂಡ್ ಸ್ಯಾನಿಟೈಸರ್ ರೀತಿಯಲ್ಲಿಬಳಕೆ ಮಾಡಿರುವ ಸಂಬಂಧ ಕೇರಳದ ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್ ವಿರುದ್ಧ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ.
ಶಬರಿಮಲೆಯಲ್ಲಿ ಎರಡು ತಿಂಗಳ ಕಾಲ ನಡೆಯಲಿರುವ ಮಂಡಳಂ-ಮಕರವಿಳಕ್ಕು ವಾರ್ಷಿಕ ಧಾರ್ಮಿಕ ಯಾತ್ರೆಗೆ ಚಾಲನೆ ದೊರಕಿದೆ.
ತೀರ್ಥಯಾತ್ರೆಯ ಕಾಲಘಟ್ಟದಲ್ಲಿ ದೇವಸ್ಥಾನದ ಬಾಗಿಲು ತೆರೆಯಲು ಹಾಗೂ ಭಕ್ತರನ್ನು ಸ್ವಾಗತಿಸಲು ಸೋಮವಾರ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಅನಂತಗೋಪನ್ ಮತ್ತು ಸ್ಥಳೀಯ ಶಾಸಕ ಪ್ರವೋದ್ ನಾರಾಯಣನ್ ಅವರೊಂದಿಗೆ ಸಚಿವರು ದೇವಸ್ಥಾನಕ್ಕೆ ಆಗಮಿಸಿದ್ದರು.
ಪುರೋಹಿತರು ನೀಡಿದ ತೀರ್ಥ ಪ್ರಸಾದವನ್ನು ಸ್ವೀಕರಿಸಿದ ಸಚಿವರು ಹ್ಯಾಂಡ್ ಸ್ಯಾನಿಟೈಸರ್ ರೀತಿಯಲ್ಲಿ ಬಳಕೆ ಮಾಡಿರುವುದಾಗಿ ಆರೋಪಿಸಲಾಗಿದೆ. ಈ ಸಂಬಂಧ ಕೇರಳ ಸಚಿವರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳು ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.