ADVERTISEMENT

ಕೇರಳ: ಆನೆ ದಾಳಿಗೆ ಮಾವುತ ಬಲಿ

ಪಿಟಿಐ
Published 5 ಫೆಬ್ರುವರಿ 2026, 13:44 IST
Last Updated 5 ಫೆಬ್ರುವರಿ 2026, 13:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ತಿರುವನಂತಪುರ: ನೆಯ್ಯಾರ್ ಅಣೆಕಟ್ಟು ಬಳಿಯ ಕೊಟ್ಟೂರು ಆನೆ ಪುನರ್ವಸತಿ ಕೇಂದ್ರದಲ್ಲಿ ಗುರುವಾರ ಆನೆ ದಾಳಿಯಿಂದ 27 ವರ್ಷದ ಮಾವುತ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಬೆಳಿಗ್ಗೆ ಸುಮಾರು 9.40ರ ವೇಳೆ ಮಾವುತನು ಜಲಾಶಯದಲ್ಲಿ ಆನೆಗೆ ಸ್ನಾನ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅವರು ಎರಡು ವರ್ಷಗಳಿಂದ ಪುನರ್ವಸತಿ ಕೇಂದ್ರದಲ್ಲಿ ಮಾವುತನಾಗಿ ಕೆಲಸ ಮಾಡುತ್ತಿದ್ದರು. 

‘ಮಾವುತನನ್ನು ಆನೆ ಸೊಂಡಿಲಿನಿಂದ ಬಡಿದು ನೀರಿಗೆ ತಳ್ಳಿದ್ದು, ಪರಿಣಾಮ ಅವರು ಮುಳುಗಿಹೋದರು. ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.