ADVERTISEMENT

ಕೇರಳ: ಕ್ಯಾನ್ಸರ್ ರೋಗಿಗಳಿಗೆ ಉಚಿತ ಬಸ್‌ ಪ್ರಯಾಣ ಯೋಜನೆ ಘೋಷಿಸಿದ ಕೆಎಸ್ಆರ್‌ಟಿಸಿ

ಪಿಟಿಐ
Published 2 ನವೆಂಬರ್ 2025, 11:25 IST
Last Updated 2 ನವೆಂಬರ್ 2025, 11:25 IST
   

ತಿರುವನಂತಪುರ: ಕ್ಯಾನ್ಸರ್‌ ರೋಗಿಗಳಿಗೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು(ಕೆಎಸ್‌ಆರ್‌ಟಿಸಿ) ಉಚಿತ ಬಸ್‌ ಪ್ರಯಾಣ ಯೋಜನೆ ಘೋಷಿಸಿದೆ.

ಕ್ಯಾನ್ಸರ್‌ ರೋಗಿಗಳು ಚಿಕಿತ್ಸೆಗಾಗಿ ರಾಜ್ಯದಲ್ಲಿನ ಯಾವುದೇ ಆಸ್ಪತ್ರೆಗೆಗಳಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಬಹುದು ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಸಾಮಾನ್ಯ ಬಸ್‌ನಿಂದ ಹಿಡಿದು ವೇಗದ ಬಸ್‌ನಲ್ಲಿಯೂ ಕೀಮೊ ತೆರಪಿ, ರೇಡಿಯೇಶನ್ ಮುಂತಾದ ಕ್ಯಾನ್ಸರ್‌ ಚಿಕಿತ್ಸೆಗಾಗಿ ರೋಗಿಗಳು ಉಚಿತವಾಗಿ ಪ್ರಯಾಣಿಸಬಹುದು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯಸ್ಥ ಪ್ರಮೋಜ್ ಶಂಕರ್ ಹೇಳಿದ್ದಾರೆ.

ADVERTISEMENT

ಯೋಜನೆಗೆ ಅರ್ಹರಾಗಿರುವ ರೋಗಿಗಳು keralartcit.com ವೆಬ್‌ಸೈಟ್‌ ಮೂಲಕ ರೇಡಿಯೊ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್‌(ಆರ್‌ಎಫ್‌ಐಡಿ) ಕಾರ್ಡ್ ಪಡೆದುಕೊಳ್ಳಬೇಕು. ಇದಕ್ಕೆ ನೋಂದಾಯಿಸಿಕೊಳ್ಳಲು ಪಾಸ್‌ಪೋರ್ಟ್‌ ಗಾತ್ರದ ಫೊಟೋ, ಆಧಾರ್‌ ಕಾರ್ಡ್‌, ವಿಳಾಸ ಮತ್ತು ಕ್ಯಾನ್ಸರ್‌ ಚಿಕಿತ್ಸೆ ಪಡೆಯುತ್ತಿರುವ ಕುರಿತ ದಾಖಲೆಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕು ಎಂದು ಮಾಹಿತಿ ನೀಡಿದ್ದಾರೆ.

ಕೆಎಸ್‌ಆರ್‌ಟಿಸಿ ಮುಖ್ಯಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಆರ್‌ಎಫ್‌ಐಡಿ ಕಾರ್ಡ್ ಅನ್ನು ಫಲಾನುಭವಿಗಳ ಮನೆಗೆ ತಲುಪಿಸಲಾಗುತ್ತದೆ. ಒಂದು ವೇಳೆ ನಕಲಿ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿದರೆ, ಅವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಅವರ ಆರ್‌ಎಫ್‌ಐಡಿ ಕಾರ್ಡ್ ರದ್ದು ಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಕ್ಯಾನ್ಸರ್‌ ರೋಗಿಗಳಿಗೆ ಉಚಿತ ಬಸ್‌ ಪ್ರಯಾಣ ಯೋಜನೆಯನ್ನು ಜಾರಿಗೊಳಿಸುವುದಾಗಿ ಸಾರಿಗೆ ಸಚಿವ ಕೆ.ಬಿ. ಗಣೇಶ್‌ ಕುಮಾರ್‌ ಅವರು ಈ ಹಿಂದೆ ಹೇಳಿದ್ದರು.

ಇದುವರೆಗೂ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಆರ್‌ಸಿಸಿ ಕಾರ್ಡ್‌ ಹೊಂದಿರುವ ಕ್ಯಾನ್ಸರ್‌ ರೋಗಿಗಳಿಗೆ ಶೇ 50ರಷ್ಟು ರಿಯಾಯಿತಿ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.