ADVERTISEMENT

ಕೋಯಿಕ್ಕೋಡ್‌ | ಮಿದುಳು ಸೋಂಕು: ಬಾಲಕಿ ಸಾವು

ಪಿಟಿಐ
Published 17 ಆಗಸ್ಟ್ 2025, 1:11 IST
Last Updated 17 ಆಗಸ್ಟ್ 2025, 1:11 IST
   

ಕೋಯಿಕ್ಕೋಡ್‌ : ಮಿದುಳು ಸೋಂಕಿನಿಂದ (ಅಮೀಬಿಕ್ ಎನ್ಸೆಫಲಿಟಿಸ್‌) ಉತ್ತರ ಕೇರಳದ ಜಿಲ್ಲೆಯೊಂದರ ಒಂಬತ್ತು ವರ್ಷದ ಬಾಲಕಿಯೊಬ್ಬಳು ಎರಡು ದಿನದ ಹಿಂದೆ ಮೃತಪಟ್ಟಿದ್ದಾಳೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಶನಿವಾರ ದೃಢಪಡಿಸಿದ್ದಾರೆ.

ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಆಗಸ್ಟ್‌ 13ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯವು ತೀವ್ರವಾಗಿ ಹದಗೆಟ್ಟಿದ್ದರಿಂದ 14ರಂದೇ ಕೋಯಿಕ್ಕೋಡ್‌ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿತ್ತು. ಆಕೆ ಅದೇ ದಿನ ಮೃತಪಟ್ಟಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT