ADVERTISEMENT

ತಿರುವನಂತಪುರ-ಕಾಸರಗೋಡು ಆರ್‌ಆರ್‌ಟಿಎಸ್‌ ಯೋಜನೆಗೆ ಕೇರಳ ಸರ್ಕಾರ ಸಮ್ಮತಿ

ಪಿಟಿಐ
Published 3 ಫೆಬ್ರುವರಿ 2026, 14:57 IST
Last Updated 3 ಫೆಬ್ರುವರಿ 2026, 14:57 IST
<div class="paragraphs"><p>ತಿರುವನಂತಪುರ-ಕಾಸರಗೋಡು ಆರ್‌ಆರ್‌ಟಿಎಸ್‌ ಯೋಜನೆಗೆ ಕೇರಳ ಸರ್ಕಾರ ಸಮ್ಮತಿ</p></div>

ತಿರುವನಂತಪುರ-ಕಾಸರಗೋಡು ಆರ್‌ಆರ್‌ಟಿಎಸ್‌ ಯೋಜನೆಗೆ ಕೇರಳ ಸರ್ಕಾರ ಸಮ್ಮತಿ

   

ತಿರುವನಂತಪುರ: ಕೇರಳ ರಾಜಧಾನಿ ತಿರುವನಂತಪುರ ಮತ್ತು ಕಾಸರಗೋಡು ನಡುವಿನ ಪ್ರಾದೇಶಿಕ ರ‍್ಯಾಪಿಡ್‌ ಟ್ರಾನ್ಸಿಟ್‌ ಸಿಸ್ಟಮ್(ಆರ್‌ಆರ್‌ಟಿಎಸ್‌) ಯೋಜನೆಯ ಪಸ್ತಾವಕ್ಕೆ ಕೇರಳ ಸರ್ಕಾರ ಮಂಗಳವಾರ ತಾತ್ವಿಕ ಅನುಮೋದನೆ ನೀಡಿದೆ.

ಸುಧಾರಿತ ರೈಲು ಮಾರ್ಗ ನಿರ್ಮಾಣದ ಈ ಯೋಜನೆಯ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಮತ್ತು ಅನುಮತಿಗಳಿಗೆ ಬೇಕಾದ ಸಲಹೆಗಳನ್ನು ಪಡೆಯುವಂತೆ ರಾಜ್ಯಸರ್ಕಾರವು ಸಾರಿಗೆ ಇಲಾಖೆಗೆ ನಿರ್ದೇಶನ ನೀಡಿದೆ.

ADVERTISEMENT

ಮೆಟ್ರೊ ಯೋಜನೆಗಳನ್ನು ಕೂಡ ಇದೇ ಯೋಜನೆಯಲ್ಲಿ ಸಂಯೋಜಿಸಲಾಗುತ್ತದೆ. 583 ಕಿ.ಮೀ. ಉದ್ದದ ರೈಲು ಮಾರ್ಗದ ಈ ಯೋಜನೆಯು ಪೂರ್ಣಗೊಳ್ಳಲು 12 ವರ್ಷ ಬೇಕಾಗಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.