ADVERTISEMENT

ಕಾಡು ಹಂದಿ ಹತ್ಯೆಗೆ ಕೇರಳ ಸರ್ಕಾರ ಅನುಮತಿ: ಪ್ರಾಣಿಪ್ರಿಯರ ಆಕ್ಷೇಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಮೇ 2022, 6:22 IST
Last Updated 26 ಮೇ 2022, 6:22 IST
   

ಬೆಂಗಳೂರು: ಬೆಳೆ ಹಾನಿ ಮಾಡುವ ಹಾಗೂ ಮನುಷ್ಯನ ಜೀವಕ್ಕೆ ಅಪಾಯ ತರಬಲ್ಲ ಕಾಡು ಹಂದಿಗಳ ಹತ್ಯೆಗೆ ಕೇರಳ ಸರ್ಕಾರ ಅನುಮತಿ ನೀಡಿದೆ.

ಸ್ಥಳೀಯಾಡಳಿತದ ಅನುಮತಿಯೊಂದಿಗೆ ಜನರು ಕಾಡು ಹಂದಿಯನ್ನು ಕೊಲ್ಲಲು ಸರ್ಕಾರ ಸೂಚನೆ ನೀಡಿರುವುದರ ವಿರುದ್ಧ ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಡು ಪ್ರದೇಶದ ಸಮೀಪದಲ್ಲಿ ವಾಸಿಸುವ ರೈತರು ಮತ್ತು ಜನರು, ಕಾಡುಹಂದಿಗಳಿಂದ ತಮಗೆ ಉಂಟಾಗುತ್ತಿರುವ ತೊಂದರೆ, ಬೆಳೆ ಹಾನಿ ಕುರಿತು ಸರ್ಕಾರಕ್ಕೆ ದೂರು ನೀಡಿದ್ದರು.

ADVERTISEMENT

ಅದರ ಸಲುವಾಗಿ ಕ್ರಮಕ್ಕೆ ಮುಂದಾಗಿರುವ ಸರ್ಕಾರ, ಯಾವ ಪ್ರದೇಶಗಳಲ್ಲಿ ಕಾಡು ಹಂದಿ ಉಪಟಳವಿದೆಯೋ, ಅಲ್ಲಿ ಹತ್ಯೆ ಮಾಡಬಹುದು ಎಂದು ಸ್ಥಳೀಯಾಡಳಿತಕ್ಕೆ ಸೂಚನೆ ನೀಡಿದೆ.

ಆದರೆ ಸರ್ಕಾರದ ಆದೇಶಕ್ಕೆ ಪ್ರಾಣಿಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಳೆ ಹಾನಿಯ ನೆಪವೊಡ್ಡಿ ಕಾಡು ಹಂದಿಗಳ ಹತ್ಯೆಗೆ ಸರ್ಕಾರ ಅನುಮತಿ ನೀಡಿರುವುದು ಸರಿಯಲ್ಲ ಎಂದು ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.