ADVERTISEMENT

ಕೇರಳ: ಅಸಂಘಟಿತ ಮಹಿಳಾ ಕಾರ್ಮಿಕರಿಗೆ ‘ಅಪಾರ್ಟ್‌ಮೆಂಟ್’

​ಪ್ರಜಾವಾಣಿ ವಾರ್ತೆ
Published 21 ಜುಲೈ 2022, 11:04 IST
Last Updated 21 ಜುಲೈ 2022, 11:04 IST
ಸಿಎಂ ಪಿಣರಾಯಿ ವಿಜಯನ್‌
ಸಿಎಂ ಪಿಣರಾಯಿ ವಿಜಯನ್‌   

ತಿರುವನಂತಪುರ: ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಅಸಂಘಟಿತ ವಲಯದದಲ್ಲಿ ಕೆಲಸ ಮಾಡುವ ಮಹಿಳೆಯರ ವಾಸ್ತವ್ಯಕ್ಕೆ ಕೇರಳ ಸರ್ಕಾರ ರಾಜ್ಯಾದಾದ್ಯಂತ ‘ಸ್ಟುಡಿಯೊ ಅಪಾರ್ಟ್‌ಮೆಂಟ್‌’ ಸ್ಥಾಪಿಸಲು ಯೋಜನೆ ರೂಪಿಸಿದೆ.

ಪೈಲಟ್‌ ಯೋಜನೆಯಾಗಿ ಕಳೆದ ವರ್ಷ ಕಾರ್ಮಿಕ ಮತ್ತು ಕೌಶಲ ಇಲಾಖೆಯು ಮೀನಂಕುಳಂ ಸಮೀಪದ ಕಿನ್‌ಫ್ರಾ ಇಂಟರ್‌ನ್ಯಾಷನಲ್ ಅಪಾರೆಲ್ ಪಾರ್ಕ್‌ನಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದೆ. ಭೂಮಿ ಹಾಗೂ ಅನುದಾನ ಲಭ್ಯತೆ ನೋಡಿಕೊಂಡು ಯೋಜನೆಯನ್ನು ಇತರೆ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಕಾರ್ಮಿಕ ಸಚಿವ ವಿ. ಶಿವನ್‌ಕುಟ್ಟಿ ಹೇಳಿದ್ದಾರೆ.

ಬಾಡಿಗೆ ಆಧಾರದ ಮೇಲೆ ಉದ್ಯೋಗಸ್ಥ ಮಹಿಳಾ ಕಾರ್ಮಿಕರಿಗೆ ಯೋಗ್ಯ ಮತ್ತು ಸುರಕ್ಷಿತ ವಸತಿ ಸೌಲಭ್ಯವನ್ನು ಒದಗಿಸಲು ಯೋಜಿಸಲಾಗಿದೆ. ಮೊದಲ ಹಂತದಲ್ಲಿ ಆರು ಮಹಡಿಯ ಅಪಾರ್ಟ್‌ಮೆಂಟ್‌ ನಿರ್ಮಿಸಲಾಗುತ್ತಿದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.