ಕೊಚ್ಚಿ: ಕೋವಿಡ್ ಇರುವಿಕೆಯನ್ನು ದೃಢಪಡಿಸುವಆರ್‌ಟಿ–ಪಿಸಿಆರ್ ಪರೀಕ್ಷಾ ದರವನ್ನು ₹ 1,700ರಿಂದ ₹ 500ಕ್ಕೆ ಇಳಿಸುವ ರಾಜ್ಯ ಸರ್ಕಾರದ ಇತ್ತೀಚಿನ ನಿರ್ಧಾರವನ್ನು ಪ್ರಶ್ನಿಸಿ ಖಾಸಗಿ ಲ್ಯಾಬ್‌ಗಳು ಸಲ್ಲಿಸಿದ್ದ ಮನವಿಯನ್ನು ಕೇರಳ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಮಾರುಕಟ್ಟೆಯಲ್ಲಿ ಅಧ್ಯಯನ ನಡೆಸಿಯೇ ಕೇರಳ ಸರ್ಕಾರವು ಆರ್‌ಟಿ–ಪಿಸಿಆರ್ ಪರೀಕ್ಷೆಯ ದರವನ್ನು ನಿಗದಿಪಡಿಸಿದೆ.ಹರಿಯಾಣ, ತೆಲಂಗಾಣ, ಉತ್ತರಾಖಂಡ ಸೇರಿದಂತೆ ದೇಶದ ಇತರ ರಾಜ್ಯಗಳ ವ್ಯಾಪ್ತಿಯಲ್ಲೂ ಇದೇ ರೀತಿಯ ಪರೀಕ್ಷಾ ದರವಿದೆ. ಹಾಗಾಗಿ, ಪರೀಕ್ಷಾ ದರಕ್ಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶವನ್ನು ನೀಡಲು ಯಾವುದೇ ಕಾರಣವಿಲ್ಲ ಎಂದು ನ್ಯಾಯಮೂರ್ತಿ ಎನ್. ನಾಗರೇಶ್ ಹೇಳಿದ್ದಾರೆ.
ಕೇರಳದಲ್ಲಿರುವ ಆರ್‌ಟಿ–ಪಿಸಿಆರ್ ಕೋವಿಡ್–19 ಪರೀಕ್ಷಾ ದರವು ₹1,700 ದೇಶದ ಇತರೆಡೆಗಳಿಗಿಂತ ಹೆಚ್ಚಾಗಿದೆ ಎಂದು ಹಲವು ದೂರುಗಳು ಬಂದಿದ್ದವು ಎಂದು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.