ADVERTISEMENT

ಕೇರಳ: ಸ್ಥಳೀಯ ಚುನಾವಣೆಗಳಲ್ಲಿ ಕ್ರಿಶ್ಚಿಯನ್‌ ಅಭ್ಯರ್ಥಿಗಳಿಗೆ ಬಿಜೆಪಿ ಮಣೆ

ಪಿಟಿಐ
Published 7 ನವೆಂಬರ್ 2025, 16:06 IST
Last Updated 7 ನವೆಂಬರ್ 2025, 16:06 IST
   

ತಿರುವನಂತಪುರ: ಕ್ರಿಶ್ಚಿಯನ್‌ ಸಮುದಾಯದ ಹೆಚ್ಚು ಜನರನ್ನು ಸ್ಥಳೀಯ ಚುನಾವಣೆಗಳ ಅಭ್ಯರ್ಥಿಗಳಾಗಿ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸುತ್ತಿದೆ.

ಯಾವ ವಾರ್ಡ್‌ಗಳಲ್ಲಿ ಕ್ರಿಶ್ಚಿಯನ್‌ ಸಮುದಾಯದ ಜನರು ಸ್ಪರ್ಧಿಸುವ ಅಗತ್ಯವಿದೆ ಎಂಬ ಬಗ್ಗೆ ತಿಳಿಯಲು ಬಿಜೆಪಿಯು ಈಗಾಗಲೇ ಸಮೀಕ್ಷೆಯನ್ನು ಆರಂಭಿಸಿದೆ ಎನ್ನಲಾಗಿದೆ.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೂಪ್‌ ಆಂಥೋನಿ ಜೋಸೆಫ್‌ ಮತ್ತು ರಾಜ್ಯ ಉಪಾಧ್ಯಕ್ಷ ಶೋನ್‌ ಜಾರ್ಜ್‌ ಅವರು ಕ್ರಿಶ್ಚಿಯನ್‌ ಸಮುದಾಯವನ್ನು ತಲುಪುವ ಕೆಲಸದ ಮುಂದಾಳತ್ವ ವಹಿಸಿದ್ದಾರೆ.

ADVERTISEMENT

ಪಕ್ಷವು ಕ್ರಿಶ್ಚಿಯನ್‌ ಅಭ್ಯರ್ಥಿಗಳ ಹುಡುಕಾಟದಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.